ಮಾಸಾಂತ್ಯಕ್ಕೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಪ್ರಜ್ವಲ್ ರೇವಣ್ಣ ತಾಕೀತು

ಮಾಸಾಂತ್ಯಕ್ಕೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಪ್ರಜ್ವಲ್ ರೇವಣ್ಣ ತಾಕೀತು
Published on

ಹಾಸನ: ನಗರದ ರೈಲ್ವೆ ಮೇಲ್ಸೆತುವೆ 2 ಪಥದ ರಸ್ತೆ ಕಾಮಗಾರಿಯನ್ನು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಂಸದ ಪ್ರಜ್ವಲ್ ರೇವಣ್ಣ ಅವರು ಕೂಡಲೇ ಕಾಮಗಾರಿ ಮುಗಿಸುವಂತೆ ಆದೇಶ ಮಾಡಿದರು.

 ನಗರದ ರೈಲ್ವೆ ಮೇಲ್ಸೆತುವೆ 2 ಪಥದ ರಸ್ತೆ ಕಾಮಗಾರಿಯನ್ನು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಂಸದ ಪ್ರಜ್ವಲ್ ರೇವಣ್ಣ ಅವರು ಕೂಡಲೇ ಕಾಮಗಾರಿ ಮುಗಿಸುವಂತೆ ಆದೇಶ ಮಾಡಿದರು. 

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ( ದಿಶಾ) ಸಭೆ ಸಂಸದ ಪ್ರಜ್ವಲ್ ರೇವಣ್ಣನವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಇಡಿ ಕರ್ನಾಟಕದಲ್ಲಿ 17 ಅಂಚೆ ಕಚೇರಿ ಮಂಜೂರಾಗಿದೆ. ಅದರಲ್ಲಿ ಹಾಸನ ಜಿಲ್ಲೆಗೆ 2 ನೂತನ ಅಂಚೆ ಕಚೇರಿ ಮಂಜೂರಾಗಿದ್ದು ಕೂಡಲೇ ಅವುಗಳನ್ನು ಸ್ಥಾಪಿಸಿ ಜನರಿಗೆ ಸೇವೆ ನೀಡುವಂತೆ ಮುಖ್ಯ ಅಂಚೆ ಅಧೀಕ್ಷಕರಿಗೆ ಸೂಚನೆ ನೀಡಿದರು.
ನಾನು ಜಿಲ್ಲೆಯ ಹಲವಾರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡುವಾಗ ಕೆಲವು ಸಾಮಾಜಿಕ ವೇತನಗಳು ಅಂಚೆ ಕಚೇರಿಯು ಮೂಲಕ ಬರುತ್ತಿವೆ. ಜಿಲ್ಲೆಯ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿಯಲ್ಲಿ 5 ಸಾವಿರ ಜನಸಂಖ್ಯೆ ಇದ್ದರೂ ಅಲ್ಲಿ ಅಂಚೆ ಕಚೇರಿ ಇಲ್ಲದೆ ಇರುವುದು ಕಂಡು ಬಂದಿದ್ದು ಜಿಲ್ಲೆಯ ಬಿಸಿಲೆ ಫಾರೆಸ್ಟ್ ಹಾಗೂ ಕೊಡಿಗೆಹಳ್ಳಿ ಬಳಿ ಹಾಗೂ ಹೊಳೆನರಸೀಪುರ ಹಂಗರಹಳ್ಳಿ ಬಳಿ ಅಂಚೆ ಕಚೇರಿ ಸ್ಥಾಪನೆ ಮಾಡಲು ಸೂಚನೆ ನೀಡಿದರು.
ಅಂಚೆ ಕಚೇರಿ ಅಧೀಕ್ಷಕರನ್ನು ಪ್ರಶ್ನೆ ಮಾಡಿದ ಸಂಸದರು ಅಂಚೆ ಕಚೇರಿ ಇಲಾಖೆಯ ಸಾಧನೆಗಳನ್ನು ತಿಳಿಸುವಂತೆ ಪ್ರಶ್ನೆ ಮಾಡಿದರು. ನಂತರ ಮಾತನಾಡಿದ ಅಂಚೆ ಅಧೀಕ್ಷಕರು ಹಾಸನ ಜಿಲ್ಲೆಯಲ್ಲಿ ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕಚೇರಿ ತೆರೆದಿದ್ದು, ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮ ನಡೆಸುತ್ತಿರುವುದಾಗಿ ತಿಳಿಸಿದರು.
ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಹಾಸನ- ಆಲೂರು- ಬೇಲೂರು ರೈಲ್ವೆ ಭೂ ಸ್ವಾಧೀನ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು. ಹಾಗೆ ಸಭೆಗೆ ಹಲವು ಇಲಾಖೆಯವರು ಎಸ್‌ಡಿಎ, ಎಫ್‌ಡಿಎ ಹಂತದ ಕಿರಿಯ ಅಧಿಕಾರಿಗಳನ್ನು ಕಳುಹಿಸಿದ್ದನ್ನು ಗಮನಿಸಿ ‘ನಾನು ದನ ಕಾಯಲು ಬಂದಿದ್ದೇನೆ. ಸಭೆಗೆ ಬಾರದಿರುವ ಇಂಜಿನಿಯರಗಳಿಗೆ ನೋಟಿಸ್ ಜಾರಿ ಮಾಡುವಂತೆ,’ ಸೂಚನೆ ನೀಡಿದರು.
ಡಿಸೆಂಬರ್ ಅಂತ್ಯದೊಳಗೆ ಸಕಲೇಶಪುರ- ಹಾಸನ ಮಾರನಹಳ್ಳಿ ಹೆದ್ದಾರಿ ರಸ್ತೆ ಕಾಮಗಾರಿ ಮುಗಿಸಿಕೊಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್‌ಗೆ ಸೂಚನೆ ನೀಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮರ್ಪಕವಾಗಿ ರಸ್ತೆ ನಿರ್ಮಾಣ ಮಾಡದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿಸದರೆ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಇಂಜಿನಿಯರಿಂಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯಿಂದ 40 ಅಡಿ ರಸ್ತೆ ಬಿಡದೆ ಮನೆ ಕಟ್ಟಿದವರಿಗೆ ಕೂಡಲೆ ಪಿಡಿಒಗಳಿಗೆ ಸೂಚನೆ ನೀಡಿ ಮನೆ ಒಡೆಸುವಂತೆ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೆಯೇ ಇಂತಹ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಸೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಪಂ ಸಿಇಒ ಡಾ.ಬಿ.ಆರ್. ಪೂರ್ಣಿಮಾ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net