

ಬಾಬುರಾವ ಯಡ್ರಾಮಿ ಕಲಬುರಗಿ
ಜನರ ಅಪೇಕ್ಷೆಯಂತೆ ತೊಗರಿ ಕಣಜ ಕಲಬುರಗಿಯಿಂದ ಇನ್ನೆರಡು ವಿಮಾನಗಳು ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್ ಮೊದಲ ವಾರದಿಂದ ಕಾರ್ಯಾಚರಣೆ ಶುರು ಮಾಡಲಿವೆ. ಇದರಿಂದಾಗಿ ದೇಶದ ರಾಜಧಾನಿ ದೆಹಲಿ ಮತ್ತು ತಿರುಪತಿಗೆ ಗಗನಯಾನ ಮೂಲಕ ನೇರವಾಗಿ ತಲುಪಬಹುದಾಗಿದೆ.
ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಶುರುವಾದಾಗಿನಿಂದ ದೆಹಲಿಗೆ ವಿಮಾನಯಾನ ಸೇವೆ ಕಲ್ಪಿಸಬೇಕೆಂಬ ಬೇಡಿಕೆ ಇತ್ತು. ಇದೀಗ ರಾಜಧಾನಿಯೊಂದಿಗೆ ತಿರುಪತಿಗೂ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದ್ದು, ಶೀಘ್ರವೇ ದಿನಾಂಕ ನಿಗದಿಯಾಗಲಿದೆ. ಬಹುಶಃ ಈ ತಿಂಗಳ ಅಂತ್ಯದೊಳಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಹೊಸದಾಗಿ ಎರಡು ಕಡೆ ವಿಮಾನಯಾನ ಸೇವೆ ಒದಗಿಸುವ ಬಗ್ಗೆ ಈಗಾಗಲೇ ಪ್ರಾಥಮಿಕ ಹಂತದ ಕಸರತ್ತುಗಳನ್ನು ಭಾರತೀಯ ವಿಮಾನ ಪ್ರಾಧಿಕಾರ ಮತ್ತು ಸ್ಟಾರ್ ಏರ್ ನಡೆಸಿದ್ದು, ಸಿದ್ಧತೆ ಮಾಡಿಕೊಳ್ಳುವಂತೆಯೂ ಸ್ಟಾರ್ ಏರ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಮೂಲಗಳು ವಿಜಯವಾಣಿಗೆ ತಿಳಿಸಿವೆ.
ಸ್ಟಾರ್ ಏರ್ ಸಂಸ್ಥೆ ವಿಮಾನ ಕಲಬುರಗಿಗೆ ಬರುವ ಸಮಯ ಶೀಘ್ರವೇ ಬದಲಾಗಲಿದೆ. ಬೆಳಗ್ಗೆ 9 ಗಂಟೆಯೊಳಗೆ ಕಲಬುರಗಿಯಲ್ಲಿ ಲ್ಯಾಂಡ್ ಆಗಲಿದೆ. ಅದೇ ವಿಮಾನ ಇಲ್ಲಿಂದ ಪ್ರಯಾಣಿಕರನ್ನು ಕರೆದುಕೊಂಡು ದೆಹಲಿ (ಹಿಂಡಾನ್)ಗೆ ತೆರಳಲಿದೆ. ಮರಳಿ ನಾಲ್ಕು ಗಂಟೆಗಳಲ್ಲಿ ಕಲಬುರಗಿಗೆ ಆಗಮಿಸಿ ತಿರುಪತಿಗೆ ಹಾರಲಿದೆ. ತಿರುಪತಿಯಿಂದ ಮೂರು ಗಂಟೆಗಳಲ್ಲಿ ಮರಳಿ ಕಲಬುರಗಿಗೆ ಆಗಮಿಸಿ ಇಲ್ಲಿಂದ ಬೆಂಗಳೂರಿಗೆ ಹೋಗಲಿದೆ. ಇಲ್ಲವೇ ತಿರುಪತಿಯಿಂದ ಬೆಂಗಳೂರಿಗೆ ನೇರವಾಗಿ ತೆರಳುವ ಸಾಧ್ಯತೆಯಿದೆ. ಇದರಲ್ಲಿ ಯಾವ ಮಾರ್ಗದಲ್ಲಿ ಕಾರ್ಯಾ ಚರಣೆ ನಡೆಸಿದರೆ ಲಾಭದಾಯಕ ಎಂಬ ಕುರಿತು ವಿಮಾನ ಸಂಸ್ಥೆ ವಾಣಿಜ್ಯ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಿದೆ.
ಸಂಜೆ ಹೊತ್ತಿಗೆ ಕಲಬುರಗಿಯಿಂದ ಬೆಂಗಳೂರಿಗೆ ಹೋಗಲು ಮತ್ತು ಅಲ್ಲಿಂದ ಕಲಬುರಗಿಗೆ ಬರಲು ವಿಮಾನಯಾನ ಸವಲತ್ತು ಕಲ್ಪಿಸಬೇಕು ಎಂಬುದು ಬಹುಜನರ ಬೇಡಿಕೆಯಾಗಿದ್ದು, ಇದು ಸಹ ಕೈಗೂಡುವ ಕಾಲ ಸನ್ನಿಹಿತವಾಗಿದೆ.
ಕಲಬುರಗಿ ನಿಲ್ದಾಣದಲ್ಲಿ ಮೂರು ವಿಮಾನ ನಿಲ್ಲಿಸಲು ಸ್ಥಳಾವಕಾಶ ಇದೆ. ಸದ್ಯ ಡೇ ಲೈಟ್ ಕಾಯರ್ಾಚರಣೆ ಮಾತ್ರ ನಡೆಯುತ್ತಿದೆ. ಸ್ಟಾರ್ ಏರ್ ವಿಮಾನ ಕಲಬುರಗಿಗೆ ಬರುವ ಸಮಯ ಬದಲಾಯಿಸಲು ಎಐಐಗೆ ಕೋರಲಾಗಿದೆ. ಅನುಮತಿ ಸಿಕ್ಕಲ್ಲಿ ಇಲ್ಲಿಂದ ದೆಹಲಿಗೆ ವಿಮಾನ ಹಾರಾಟ ನಡೆಸಲು ತಯಾರಿ ನಡೆದಿದೆ. ಇದು ಇನ್ನೂ ಚಚರ್ೆ ಹಂತದಲ್ಲಿದ್ದು, ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.
| ಜ್ಞಾನೇಶ್ವರರಾವ್ ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ
ಕಲಬುರಗಿಯಿಂದ ದೆಹಲಿ (ಹಿಂಡಾನ್) ಮತ್ತು ತಿರುಪತಿಗೆ ವಿಮಾನ ಕಾಯರ್ಾಚರಣೆ ನಡೆಸಲು ಸ್ಟಾರ್ ಏರ್ ನಿರ್ಧರಿಸಿದ್ದಾಗಿ ಕಂಪನಿ ಹೇಳಿದೆ. ಈಗ ಬೆಂಗಳೂರಿನಿಂದ ಬರುವ ವಿಮಾನದ ಸಮಯ ಬದಲಾಗಲಿದೆ. ಅದೇ ವಿಮಾನ ವಾರದಲ್ಲಿ ಮೂರು ದಿನ ದೆಹಲಿ, ಮೂರು ದಿನ ತಿರುಪತಿಗೆ ಹಾರಿಸುವ ಸಾಧ್ಯತೆ ಇದೆ. ಕೆಲ ದಿನಗಳಲ್ಲಿ ದಿನಾಂಕ ಪ್ರಕಟಿಸುವುದಾಗಿ ವಿಮಾನ ಸಂಸ್ಥೆ ಮಾಲೀಕರು ಭರವಸೆ ನೀಡಿದ್ದು, ಮಾಸಾಂತ್ಯ ಇಲ್ಲವೇ ಏಪ್ರಿಲ್ನಲ್ಲಿ ಹೊಸ ವಿಮಾನಗಳ ಹಾರಾಟ ಶುರುವಾಗಬಹುದು.|ಅಮರನಾಥ ಸಿ.ಪಾಟೀಲ್ ಎಚ್ಕೆಸಿಸಿಐ ಅಧ್ಯಕ್ಷ
ಕಳೆದ ನ.22ರಂದು ಕಲಬುರಗಿ ನಿಲ್ದಾಣ ಉದ್ಘಾಟನೆಯಾದಾಗ ಬೆಂಗಳೂರಿಗೆ ಸ್ಟಾರ್ ಏರ್ ವಿಮಾನ ವಾರಕ್ಕೆ ಮೂರು ದಿನ ಸಂಚರಿಸುತ್ತಿತ್ತು. ಈಗದು ವಾರದ ಎಲ್ಲ ದಿನ ಹಾರಾಟ ನಡೆಸಿದೆ. ಜತೆಗೆ ಇಂಡಿಯನ್ ಏರ್ಲೈನ್ಸ್ ಅಂಗ ಸಂಸ್ಥೆ ಅಲಯನ್ಸ್ ಏರ್ ವಿಮಾನ ಸಹ ನಿತ್ಯ ಕಾಯರ್ಾಚರಣೆ ನಡೆಸಿದೆ. ಸೂರತ್ ಮಾದರಿಯಲ್ಲಿ ಕಲಬುರಗಿ ಏರ್ಪೋಟರ್್ ಕೆಲವೇ ದಿನಗಳಲ್ಲಿ ಬಿಜಿಯಾಗುವ ಲಕ್ಷಣಗಳಿವೆ.
| ಡಾ.ಉಮೇಶ ಜಾಧವ್ ಸಂಸದ