ಮಾವುತರಿಗೆ ಸಮವಸ್ತ್ರ ವಿತರಣೆ

DSC_0783
Published on

ಮೈಸೂರು: ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿಗಳಿಗೆ ಸೋಮವಾರ ಸಮವಸ್ತ್ರ ವಿತರಿಸಲಾಯಿತು.

ಗಜಪಡೆಯನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಮಾವುತ, ಕಾವಾಡಿಗಳ ನಿರ್ವಹಣೆ ಮಾಡಲಿದ್ದು, ಇವರ ಮೇಲಿನ ಕಾಳಜಿಯಿಂದ ಮೊದಲ ತಂಡದಲ್ಲಿ ಬಂದಿರುವ 9 ಆನೆಗಳ ಮಾವುತ, ಕಾವಾಡಿಗಳಿಗೆ ಸಮವಸ್ತ್ರ ನೀಡಲಾಯಿತು. 2ನೇ ತಂಡದಲ್ಲಿ ಬಂದಿರುವ 5 ಆನೆಗಳ ಮಾವುತ ಹಾಗೂ ಕಾವಾಡಿಗಳಿಗೆ ಸಮವಸ್ತ್ರಕ್ಕೆ ಅಳತೆ ನೀಡಲಾಗಿದ್ದು, ಇನ್ನೆರಡು ದಿನದಲ್ಲಿ ಅವರಿಗೂ ಉಡುಪು ದೊರೆಯಲಿದೆ.

ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ, ತಾಲೀಮಿನ ವೇಳೆ ಸೇರಿದಂತೆ ಜಂಬೂಸವಾರಿ ಮೆರವಣಿಗೆಯಲ್ಲಿ ಆನೆಗಳನ್ನು ಇವರು ಮುನ್ನಡೆಸಲಿದ್ದಾರೆ. ಈ ಸಂದರ್ಭ ಶಿಸ್ತಿನಿಂದ ಕಾಣಲೆಂಬ ದೃಷ್ಟಿಯಿಂದ ಒಂದು ಜತೆ ಸಮವಸ್ತ್ರ ನೀಡಲಾಗಿದೆ ಎಂದರು.

ಜಂಬೂಸವಾರಿ ಸಮೀಪಿಸುತ್ತಿರುವುದರಿಂದ ಮಾವುತ, ಕಾವಾಡಿಗಳು ಜಂಬೂಸವಾರಿ ಮೆರವಣಿಗೆಯ ಯಶಸ್ವಿಗೆ ಶ್ರಮಿಸಬೇಕು. ಆನೆಗಳ ಬಳಿ ಅಪರಿಚಿತರು ಬರದಂತೆ ಕಟ್ಟೆಚ್ಚರವಹಿಸಬೇಕು. ನವರಾತ್ರಿ ಆರಂಭವಾದರೆ ಅರಮನೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಆ ವೇಳೆ ಆನೆಗಳನ್ನು ನೋಡಲು ಹೆಚ್ಚಿನ ಜನರು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾವುತ, ಕಾವಾಡಿಗಳಲ್ಲಿ ಯಾರಾದರೂ ಒಬ್ಬರು ಆನೆಗಳ ಬಳಿ ಇರುವಂತೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net