ಮಾವಿನ ಬಾಕ್ಸ್‌ನಲ್ಲಿ ಅಡಗಿದ್ದ ಹಾವು ಸೆರೆ

ಮನೆಯ ಒಳಗೆ ಮಾವಿನ ಬಾಕ್ಸ್ ನಲ್ಲಿ ಸೇರಿದ್ದ ಹಾವು
02
Published on

ಸಿದ್ದಾಪುರ: ಮನೆಯ ಒಳಗೆ ಮಾವಿನ ಬಾಕ್ಸ್‌ನಲ್ಲಿ ಅಡಗಿದ್ದ ಹಾವನ್ನು ಗುರುವಾರ ಉರಗ ರಕ್ಷಕ ಸ್ನೇಕ್ ಸುರೇಶ್ ಯಶಸ್ವಿಯಾಗಿದ್ದಾರೆ.


ಸಿದ್ದಾಪುರ ಗುಹ್ಯ ಗ್ರಾಮದ ಜ್ಯೋತಿ ಪೊನ್ನಪ್ಪ ಎಂಬುವರ ಮನೆಯ ಒಳಗಿದ್ದ ಹಾವನ್ನು ರಕ್ಷಿಸಲಾಗಿದೆ. ಮನೆಯ ಮಾವಿನ ಹಣ್ಣಿನ ಬಾಕ್ಸ್ ಇಡಲಾಗಿತ್ತು. ಹಣ್ಣನ್ನು ತಿನ್ನಲು ಬಾಕ್ಸ್ ತೆರೆದಾಗ ಅದರಲ್ಲಿ ಹಾವನ್ನು ಕಂಡ ಕುಟುಂಬದವರು ಭಯಭೀತರಾಗಿದ್ದಾರೆ. ಕೂಡಲೇ ಗುಹ್ಯ ಗ್ರಾಮದ ಉರಗ ರಕ್ಷಕ ಸುರೇಶ್ ಪೂಜಾರಿ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಸ್ಥಳಕ್ಕೆ ತೆರಳಿದ ಸುರೇಶ್ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿದು ನಂತರ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net