

ವಿಜಯಪುರ: ಬಿಸಿಲೂರಿನಲ್ಲಿ ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಕಳ್ಳಕಾಕರ ಹಾವಳಿ ಹೆಚ್ಚುತ್ತಿದೆ !
ಸಿಂದಗಿ ತಾಲೂಕಿನ ಸುಂಗಟಾಣ ಗ್ರಾಮದಲ್ಲಿ ಕಳ್ಳರು ಬ್ಯಾಂಕ್ ದರೋಡೆಗೆ ಯತ್ನಿಸಿದರೆ, ಬಬಲೇಶ್ವರ ತಾಲೂಕಿನ ಹಲಗಣಿಯಲ್ಲಿ ಎರಡು ಮನೆಗಳಲ್ಲಿ ಕಳ್ಳತನ ನಡೆಸಿದ್ದಾರೆ.
ಗುರುವಾರ ರಾತ್ರಿ ಸಿಂದಗಿ ತಾಲೂಕಿನ ಸುಂಗಟಾಣ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ನುಗ್ಗಿದ ಕಳ್ಳರು ನಗದು ದೋಚಲು ಪ್ರಯತ್ನಿಸಿದ್ದಾರೆ.
ಬ್ಯಾಂಕ್ ನ ಗ್ರಿಲ್ ಮುರಿದು ಒಳನುಗ್ಗಿದ ಮೂವರು ಕಳ್ಳರು ಲಾಕರ್ ತೆಗೆಯಲೆತ್ನಿಸುತ್ತಿದ್ದಂತೆ ಸೈರನ್ ಕೇಳಿಸಿದೆ. ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯಾವಳಿಗಳು ಸೆರೆಯಾಗಿವೆ.
ಹಲಗಣಿ ಗ್ರಾಮದ ಎರಡು ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸೇರಿ 60 ಸಾವಿರ ನಗದು ಕಳ್ಳತನವಾಗಿದೆ.
ಲಕ್ಷ್ಮಿ ಮಲ್ಲಪ್ಪ ಗುಣದಾಳ ಮನೆಯಲ್ಲಿ ಎರಡು ತೊಲಿ ಚಿನ್ನ ಹಾಗೂ ಬೆಲೆಬಾಳುವ ವಸ್ತುಗಳು,
ರಾಮಮಗೌಡ ಬಿರಾದಾರ ಮನೆಯಲ್ಲಿ ಒಂದು ತೊಲಿ ಚಿನ್ನ ಹಾಗೂ 60 ಸಾವಿರ ನಗದು ಕಳ್ಳತನ ಅಗಿದೆ.
ರಾತ್ರಿ ವೇಳೆ ಟೇರಸ್ ಮೇಲೆ ಮಲಗಿದ ವೇಳೆ ಕಳ್ಳರ ಕೈಚಳಕ ತೋರಿದ್ದಾರೆ. ಬಬಲೇಶ್ವರ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.