ಮಾಳಿ-ಮಾಲಗಾರ ಸಮಾವೇಶ ಇತಿಹಾಸವಾಗಲಿ

2Aratal1
ಅರಟಾಳ ಗ್ರಾಮದಲ್ಲಿ ಮಾಳಿ-ಮಾಲಗಾರ ಸಮುದಾಯದಿಂದ ಕಾಂಗ್ರೆಸ್ ಮುಖಂಡ ಗಿರೀಶ ಬುಟಾಳಿ ಅವರನ್ನು ಸತ್ಕರಿಸಲಾಯಿತು. ಸದಾನಂದ ಮಾಡಗ್ಯಾಳ, ಅಣ್ಣಪ್ಪ ಮಾಳಿ, ಪ್ರಕಾಶ ದಮಡಿ, ಎಸ್.ಎಸ್.ಮಾಳಿ, ಬಾಳೇಶ ಮಾಳಿ, ಮಲ್ಲಕು ಮಾಳಿ ಇತರರಿದ್ದರು.
Published on

ಅರಟಾಳ: ರಾಜ್ಯ ಮಾಳಿ-ಮಾಲಗಾರ ಬೃಹತ್ ಸಮಾವೇಶ ಡಾ. ಸಿ.ಬಿ.ಕುಲಗೋಡ ಅವರ ಮುಂದಾಳತ್ವದಲ್ಲಿ ನಮ್ಮ ಸಮುದಾಯದ ಶಕ್ತಿ ಪ್ರದರ್ಶನ ಇತಿಹಾಸವಾಗಬೇಕು ಎಂದು ತಾಲೂಕು ಮಾಳಿ-ಮಾಲಗಾರ ಸಮುದಾಯ ಮುಖಂಡ ಗಿರೀಶ ಬುಟಾಳಿ ಹೇಳಿದರು.

ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಳಿ-ಮಾಲಗಾರ ಸಮುದಾಯ ಸಭೆಯಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಸಮುದಾಯ ಯಾವುದೇ ಸೌಲಭ್ಯ ಪಡೆಯದೇ ಸೌಮ್ಯವಾಗಿ ಬದುಕುವ ಸಮುದಾಯ ಎಂದರು.

ಇಂದು ನಾವು ಒಗ್ಗೂಡಿ ಶಕ್ತಿ ಪ್ರದರ್ಶಿಸುವ ಮೂಲಕ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳವಣಿಗೆಯಾಗಬೇಕಿದೆ. ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುತ್ತಿರುವ ಸಮಾವೇಶಕ್ಕೆ ಸಿಎಂ ಸೇರಿ ಅನೇಕ ಮಂತ್ರಿಗಳು ಪಾಲ್ಗೊಳ್ಳಲಿದ್ದು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಮಾಳಿ-ಮಾಲಗಾರ ಸಂಘಟನೆ ಕಾರ್ಯದರ್ಶಿ ಸದಾನಂದ ಮಾಡಗ್ಯಾಳ ಮಾತನಾಡಿದರು. ಅಣ್ಣಪ್ಪ ಮಾಳಿ, ಪ್ರಕಾಶ ದಮಡಿ, ಎಸ್.ಎಸ್.ಮಾಳಿ, ಬಾಳೇಶ ಮಾಳಿ, ಮಲ್ಲಕು ಮಾಳಿ, ತಿಪ್ಪಣ ಮಾಳಿ, ಶಿವಪುತ್ರ ದಮಡಿ, ಶಂಕರ ಮಾಳಿ, ಮಾಧವಾನಂದ ಮಾಳಿ, ಜ್ಯೋತಿಬಾ ಮಾಳಿ, ರಾಮು ನಿಂಗನೂರ, ಅಶೋಕ ಮಾಳಿ, ಅಶೋಕ ದಮಡಿ, ಸುರೇಶ ದಮಡಿ, ವಿಲಾಸ ಮಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net