ಮಾಲೀಕರು ಮನೆಯಲ್ಲಿ ಇರುವಾಗಲೇ ಮನೆ ಬೀಗ ಮುರಿದು ಕಳವು

house-Theft
Published on

ಮೈಸೂರು: ರಾಜೀವ್‌ನಗರದಲ್ಲಿ ಮಾಲೀಕರು ಮನೆಯಲ್ಲಿ ಇರುವಾಗಲೇ ಮನೆಯಲ್ಲಿ 1.33 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಲಾಗಿದೆ.

ಎಚ್.ಎಂ.ಬಸವರಾಜು ಎಂಬವರ ಮನೆಯಲ್ಲಿ ಇದು ನಡೆದಿದೆ. ಇವರು ರಾತ್ರಿ ಮನೆಯ ಬಾಗಿಲಿಗೆ ಬೀಗ ಹಾಕಿ ಮಲಗಿದ್ದರು.

ಏ.22ರ ಬೆಳಗ್ಗೆ ನಾಯಿ ಬೊಗಳುವ ಶಬ್ದವಾಗಿದೆ. ಇದರಿಂದ ಎಚ್ಚೆತ್ತ ಅವರು ಮನೆಯನ್ನು ಪರಿಶೀಸಿದಾಗ ಬೀರುವಿನ ಬಾಗಿಲು ತೆರೆದ ಸ್ಥಿತಿಯಲ್ಲಿ ಇತ್ತು.

ಅದರಲ್ಲಿದ್ದ 30 ಗ್ರಾಂ ಚಿನ್ನಾಭರಣ, 30 ಸಾವಿರ ರೂ. ನಗದನ್ನು ಖದೀಮರು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net