ಮಾರ್ದನಿಸಿದ ಮೋದಿ ಪರ ಜಯಘೋಷ

PM Modi
Published on

ಚಿತ್ರದುರ್ಗ: ಇಲ್ಲಿನ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಅವರು ಗುರುವಾರ ನಾಮಪತ್ರ ಸಲ್ಲಿಕೆ ಅಂಗವಾಗಿ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ನಂತರ ಅಲ್ಲಿಂದ ಒನಕೆ ಓಬವ್ವ ವೃತ್ತದವರೆಗೂ ನಡೆದ ಶಕ್ತಿ ಪ್ರದರ್ಶನದ ಮೆರವಣಿಗೆಯಲ್ಲಿ ಸುಡು ಬಿಸಿಲು ಲೆಕ್ಕಿಸದೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹೆಜ್ಜೆ ಹಾಕಿದರು.

ಮುಖಕ್ಕೆ ಮೋದಿ ಮಾಸ್ಕ್ ಧರಿಸಿ ಅನೇಕರು ಗಮನ ಸೆಳೆದರು. ಮೈತ್ರಿ ಪಕ್ಷದ ಬಾವುಟಗಳು, ಟೋಪಿಗಳು, ಶಲ್ಯಗಳು ರಾರಾಜಿಸಿದವು. ಮಾರ್ಗದುದ್ದಕ್ಕೂ ಭಾರತ್ ಮಾತಾ ಕೀ ಜೈ, ಮೋದಿ ಮೋದಿ ಎಂಬ ಜಯಘೋಷ ಮಾರ್ದನಿಸಿತು. ಇದು ಕಮಲ-ತೆನೆ ಪಾಳಯದಲ್ಲಿ ಉತ್ಸಾಹ ಇಮ್ಮಡಿಗೊಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net