

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಎಲ್ಲ ಸದಸ್ಯರು, ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರು, ಹಾಲಿ ನಿರ್ದೇಶಕರು ಮತ್ತು ಸಿಬ್ಬಂದಿ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಉನ್ನತ ಮುಟ್ಟದ ಪ್ರಗತಿ ಹೊಂದಿದೆ. 2022ನೇ ಸಾಲಿಗೆ ಬ್ಯಾಂಕ್ ನೂರು ವರ್ಷ ಪೂರೈಸಿದ್ದು ಮಾರ್ಚ್ 6ರಂದು ವಿರಾಜಪೇಟೆ ಕೊಡವ ಸಮಾಜದಲ್ಲಿ ಶತಮಾನೋತ್ಸವ ಆಚರಿಸಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಕರ್ನಂಡ ಸೋಮಯ್ಯ ಹೇಳಿದರು.
ಬ್ಯಾಂಕ್‌ನಲ್ಲಿ ಒಟ್ಟು 3804 ಸದಸ್ಯರಿದ್ದಾರೆ. 2,18,75,530.00 ರೂ. ಪಾಲು ಬಂಡವಾಳ ಇದೆ. ಬ್ಯಾಂಕಿನ ಒಟ್ಟು ಠೇವಣೆ 56,29,60,018.00 ರೂ. ಇರುತ್ತದೆ. ವರದಿ ಸಾಲಿನಲ್ಲಿ 23,62,15,350 ರೂ. ಸಾಲ ವಿತರಿಸಲಾಗಿದೆ. 20,82,60,018.00 ರೂ. ಸಾಲ ವಸೂಲಿ ಮಾಡಲಾಗಿದೆ. ವರ್ಷಾಂತ್ಯಕ್ಕೆ 28,38,91,337.00 ರೂ. ಬಾಕಿ ಇದ್ದು, ಶೇ 90.09ರಷ್ಟು ಸಾಲ ವಸೂಲಾತಿ ಆಗಿದೆ. ವರದಿ ಸಾಲಿನಲ್ಲಿ ಒಟ್ಟು 63,85,981.22 ರೂ. ಲಾಭ ಗಳಿಸಿದೆ. ಲೆಕ್ಕ ಪರಿಶೋಧನೆಯಲ್ಲಿ ಎ ವರ್ಗ ನೀಡಲಾಗಿದೆ ಎಂದು ಸುದ್ದಿಗೊಷ್ಠಿಯಲ್ಲಿ ಹೇಳಿದರು.
ಮಾಜಿ ಅಧ್ಯಕ್ಷ ಕೋಲತಂಡ ಬೋಪಯ್ಯ ಮಾತನಾಡಿ, ಮಾರ್ಚ್ 6ರಂದು ಬೆಳಗ್ಗೆ 10 ಗಂಟೆಗೆ ಬ್ಯಾಂಕ್‌ನ ನವೀಕರಣ ಕೋಣೆಯನ್ನು ಉದ್ಘಾಟಿಸಲಾಗುವುದು. 10.30 ಗಂಟೆಗೆ ವಿರಾಜಪೇಟೆ ಕೊಡವ ಸಮಾಜದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು.
ನಿರ್ದೇಶಕ ಮಾದೇಯಮಡ ಸಂಪಿಪೂಣಚ್ಚ ಮಾತನಾಡಿ, ಬ್ಯಾಂಕ್ ಅಧ್ಯಕ್ಷ ಕರ್ನಂಡ ಸೋಮಯ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ಯಾಂಕ್‌ನ ನವೀಕೃತ ಕೋಣೆಯನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕ ಕೋಬಾರನ ಬೋಪಯ್ಯ ನೆರವೇರಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಡೇಂಪಡ ಸುಜಾ ಕುಶಾಲಪ್ಪ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್. ಕೃಷ್ಣಪ್ರಸಾದ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಇ. ಮೋಹನ್, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೊಹನ್, ಉಪಸ್ಥಿತರಿರುವರು. ಅಧ್ಯಕ್ಷ ಕರ್ನಂಡ ಸೋಮಯ್ಯ, ಮಾಜಿ ಅಧ್ಯಕ್ಷರಾದ ಮೇರಿಯಂಡ ಪೂವಯ್ಯ, ಕೋಲತಂಡ ಬೋಪಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಎಂ. ಚರ್ಮಣ, ನಿರ್ದೇಶಕರಾದ ಎಂ.ಎಂ. ನಂಜಪ್ಪ, ಎ.ಪಿ. ಪ್ರಸನ್ನ, ಕೆ.ಬಿ. ಪ್ರತಾಪ್, ಪಿ.ಎಂ. ರಚನ್, ಎಂ.ಪಿ. ಕಾವೇರಪ್ಪ, ವಿ.ಪಿ. ರಮೇಶ್, ಎಂ.ಕೆ. ದೇವಯ್ಯ, ಪಿ.ಕೆ. ಅಬ್ದುಲ್ ರೆಹಮಾನ್, ಎಚ್.ಸಿ. ಮುತ್ತಮ್ಮ, ಎಸ್.ಬಿ. ಜುಬಿನಾ, ಐ.ಎಂ. ಕಾವೇರಮ್ಮ, ವ್ಯವಸ್ಥಾಪಕ ಸಿ.ಕೆ. ಪೂವಯ್ಯ ಉಪಸ್ಥಿತರಿದ್ದರು.