ಮಾರ್ಗಸೂಚಿ ಫಲಕ ಅಳವಡಿಸಿದ ಸಾರ್ವಜನಿಕರು

26mnd2
Published on

ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದ ಬಳಿಯಿರುವ ಸರ್ಕಲ್​ನಲ್ಲಿ ಸಾರ್ವಜನಿಕರೇ ಮುಂದಾಗಿ ಹೊಸ ನಾಮಫಲಕ ಅಳವಡಿಸಿದ್ದಾರೆ.

ಈ ಸರ್ಕಲ್​ನಲ್ಲಿ ಇದ್ದ ಹಳೆಯ ನಾಮಫಲಕ ತುಕ್ಕು ಹಿಡಿದು ಹೋಗಿತ್ತು. ಯಾವ ಮಾರ್ಗದಲ್ಲಿ ಹೋದರೆ ಯಾವ ಊರು ಎಂಬುದು ಈ ನಾಮಫಲಕದಲ್ಲಿ ಸ್ಪಷ್ಟವಾದ ಹೆಸರುಗಳು ಪ್ರಯಾಣಿಕರಿಗೆ ಕಾಣಿಸುತ್ತಿರಲಿಲ್ಲ. ಈ ಸರ್ಕಲ್​ಗೆ ಬಂದು ವಾಹನಗಳನ್ನು ನಿಲ್ಲಿಸಿ ತಾವು ಹೋಗುವ ಮಾರ್ಗವನ್ನು ಅಲ್ಲಿದ್ದ ಜನರಿಗೆ ಕೇಳಿ ಹೋಗುತ್ತಿದ್ದರು. ರಾತ್ರಿ ವೇಳೆ ಪ್ರಯಾಣಿಸುವವರಿಗೆ ತುಂಬಾ ತೊಂದರೆಯಾಗಿತ್ತು.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಈ ಸರ್ಕಲ್​ನಲ್ಲಿ ಹೊಸ ನಾಮಫಲಕವನ್ನು ಅಳವಡಿಸುವ ಬಗ್ಗೆ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ, ಪಿಡಬ್ಲು್ಯಡಿ ಅಧಿಕಾರಿಗಳು ಸ್ಪಂದಿಸದ ಕಾರಣ ನಾವೇ ಮುಂದಾಗಿ ಹೊಸ ನಾಮ ಫಲಕವನ್ನು ಅಳವಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ನಾಮ ಫಲಕಗಳನ್ನು ಬದಲಾಯಿಸದೇ ಇದ್ದಲ್ಲಿ ಪಟ್ಟಣದ ಎಲ್ಲ ನಾಮಫಲಕಗಳನ್ನು ನಮ್ಮ ಸ್ವಂತ ಖರ್ಚಿನಲ್ಲಿ ಬದಲಾಯಿಸುತ್ತೇವೆ ಎಂದು ಪಟ್ಟಣದ ನಿವಾಸಿಗಳಾದ ಶ್ರೀಧರ ಉಪ್ಪಾರ ಮತ್ತು ಪವನ ಹೆಬ್ಬಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net