ಮಾರ್ಗಸೂಚಿ ಫಲಕ ಅಳವಡಿಕೆ ಉತ್ತಮ

16sri-1
ಶೃಂಗೇರಿ ತಾಲೂಕು ಮೆಣಸೆ ರೇಣುಕಾಂಬಾ ನಗರದಲ್ಲಿ ಮಾರ್ಗಸೂಚಿ ಫಲಕವನ್ನು ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ ಉದ್ಘಾಟಿಸಿದರು. ಸವಿತಾ ಶಿವಶಂಕರ್, ರಾಜು, ದಿನೇಶ್ ಇದ್ದರು.
Published on

ಶೃಂಗೇರಿ: ಗ್ರಾಮೀಣ ಪ್ರದೇಶದಲ್ಲಿ ಮಾರ್ಗಸೂಚಿ ಫಲಕ ಇದ್ದರೆ ಅಪರಿಚಿತರಿಗೆ ಅನುಕೂಲವಾಗುತ್ತದೆ ಎಂದು ಮೆಣಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ ಹೇಳಿದರು.

ಮೆಣಸೆ ಗ್ರಾಮ ಪಂಚಾಯಿತಿಯ ರೇಣುಕಾಂಬಾ ನಗರದಲ್ಲಿ ಶನಿವಾರ ಆದರ್ಶ ರೈತಮಿತ್ರ ಕೂಟ ಅಳವಡಿಸಿದ ಮಾರ್ಗಸೂಚಿ ಫಲಕ ಉದ್ಘಾಟಿಸಿ ಮಾತನಾಡಿದರು.

ಎರಡು ರಸ್ತೆ ಇರುವಲ್ಲಿ ಪ್ರವಾಸಿಗರು ಯಾವುದರಲ್ಲಿ ಹೋಗಬೇಕು ಎಂಬ ಗೊಂದಲಕ್ಕೆ ಸಿಲುಕುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ವೇಳೆ ಸಂಚರಿಸುವಾಗ ಸೂಕ್ತ ಮಾಹಿತಿ ದೊರೆಯದೆ ಪರದಾಡುವಂತಾಗುತ್ತದೆ. ನಿಗದಿತ ಸ್ಥಳಕ್ಕೆ ತಲುಪಲಾಗದೆ ಸುತ್ತಾಡುವಂತಾಗುತ್ತದೆ. ಅಗತ್ಯವಿದ್ದ ಕಡೆಗೆ ಸಂಘ, ಸಂಸ್ಥೆಗಳು ಮಾರ್ಗಸೂಚಿ ಫಲಕ ಹಾಕುವುದರಿಂದ ಅನುಕೂಲವಾಗುತ್ತದೆ ಎಂದರು.

ಆದರ್ಶ ರೈತಮಿತ್ರ ಕೂಟದ ಕೆರೆಮನೆ ಭರತ್‌ರಾಜ್ ಮಾತನಾಡಿ, ರೈತಮಿತ್ರ ಕೂಟದಿಂದ ಮಸಿಗೆ ಗ್ರಾಮದ ಅನೇಕ ಕಡೆ ಮಾರ್ಗಸೂಚಿ ಫಲಕ ಹಾಕಲಾಗಿದೆ. ನಮ್ಮ ಗ್ರಾಮದಲ್ಲಿರುವ ಮುಖ್ಯ ರಸ್ತೆಯಲ್ಲಿ ಫಲಕ ಹಾಕಲಾಗಿದೆ ಎಂದು ತಿಳಿಸಿದರು.

ಮೆಣಸೆ ಗ್ರಾಮ ಪಂಚಾಯಿತಿ ಸದಸ್ಯರಾದ ಸವಿತಾ ಶಿವಶಂಕರ್, ಕೋಡೂರು ರಾಜು, ಕೆರೆಮನೆ ದಿನೇಶ್, ಶಿವಗುರು, ರಾಘವೇಂದ್ರ ಆಚಾರ್ಯ, ಜಯಂತ ಶೆಟ್ಟಿ, ಮರಟೆ ವಸಂತ, ಶಶಿಕಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net