

ನುಗ್ಗೇಹಳ್ಳಿ: ಚನ್ನರಾಯಪಟ್ಟಣದ ಸಾವಿತ್ರಮ್ಮ ಕರಿಯಪ್ಪಗೌಡ ಕಲ್ಯಾಣ ಮಂಟಪದಲ್ಲಿ ಜೂನ್ 10ರಂದು ಮಹಾರಾಷ್ಟ್ರದ ಜಗದ್ಗುರು ರಮಾನಂದಾಚಾರ್ಯ ದಕ್ಷಿಣಪೀಠ ಶ್ರೀಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜ ಶ್ರೀಗಳಿಂದ ಸಮಸ್ಯೆ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸ್ವ ಸ್ವರೂಪ ಸಂಪ್ರದಾಯ ಭಕ್ತ ಸೇವಾ ಸಮಿತಿ ಅಧ್ಯಕ್ಷ ಭುವನಹಳ್ಳಿ ಯೋಗೇಶ್ ತಿಳಿಸಿದರು.
ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಕಾರ್ಯಕ್ರಮದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನ ಜನತೆಯ ಒಳಿತಿಗಾಗಿ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಹಾರಾಷ್ಟ್ರದ ಜಗದ್ಗುರು ರಮಾನಂದಾಚಾರ್ಯ ದಕ್ಷಿಣ ಪೀಠದ ಶ್ರೀ ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜ ಶ್ರೀಗಳಿಂದ ಸಮಸ್ಯೆ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜೂನ್ 10ರಂದು ಬೆಳಗ್ಗೆ 9ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಮಸ್ಯೆ ಮಾರ್ಗದರ್ಶನ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.
ಜಗದ್ಗುರು ರಮಾನಂದಾಚಾರ್ಯ ದಕ್ಷಿಣ ಪೀಠ ಸ್ವ ಸ್ವರೂಪ ಸಂಪ್ರದಾಯ ಬೆಂಗಳೂರು ಭಕ್ತ ಸೇವಾ ಸಮಿತಿ ಜಿಲ್ಲಾ ನಿರೀಕ್ಷಕ ಬಾಲ ಸಾಹೇಬ್ ಪೇಳು, ಜಿಲ್ಲಾಧ್ಯಕ್ಷ ಮಹದೇವ್ ನಿಕ್ಕಂ, ಸದಸ್ಯ ಜಗದೀಶ್ ಬೋಜೆ, ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ.ವಿಠ್ಠಲ್ ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಮುಖಂಡರಾದ ಕಿಟ್ಟಣ್ಣ, ಜಂಬೂರ್ ಮಹೇಶ್, ದೊಡ್ಗನ್ನಿ ಸತೀಶ್, ಪಿ.ದಾಸಪುರ ಮಂಜುನಾಥ್ ಮತ್ತಿತರರು ಹಾಜರಿದ್ದರು.