ಮಾರ್ಕೆಟಿಂಗ್ ಜ್ಞಾನದಿಂದ ಉದ್ಯೋಗಾವಕಾಶ

c SRS .
Published on

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಮಾರ್ಕೆಟಿಂಗ್ ವಿಷಯ ಕುರಿತು ಇತ್ತೀಚೆಗೆ ಎರಡು ದಿನಗಳ ಕಾಲ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರ ಉದ್ಘಾಟಿಸಿದ ಪ್ರಾಚಾರ‌್ಯ ಪ್ರೊ.ಜಿ.ಪಿ. ನಂದನ್ ಮಾತನಾಡಿ, ಇಂದಿನ ಟೆಕ್ನಾಲಜಿ ಹಾಗೂ ಸಾಮಾಜಿಕ ಜಾಲತಾಣದ ಪ್ರಪಂಚದಲ್ಲಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಕುರಿತು ಜ್ಞಾನದ ಅಗತ್ಯವಿದೆ. ಇದರಿಂದ ವ್ಯವಹಾರ ಹಾಗೂ ಉದ್ಯೋಗಾವಕಾಶ ಲಭಿಸುತ್ತವೆ ಎಂದರು.

ಬೆಂಗಳೂರಿನ ಸಂಪನ್ಮೂಲ ವ್ಯಕ್ತಿಗಳಾದ ಕೆ. ಅಭಿನವ್, ಪ್ರಸನ್ನ ವೆಂಕಟೇಶ್ ಉಪನ್ಯಾಸ ನೀಡಿದರು. ಬಿಕಾಂ, ಬಿಬಿಎ ವಿಭಾಗದ ಮುಖ್ಯಸ್ಥ್ಥೆ ಪ್ರೊ. ಸಾಧನಾ ಅಭಿಷೇಕ್, ಕಾರ್ಯಾಗಾರದ ಸಂಘಟಕ ಡಾ.ಜಿ. ಈರಣ್ಣ, ಪ್ರಾಧ್ಯಾಪಕ ಡಾ.ಕೆ.ಆರ್. ಹೇಮಂತಕುಮಾರ್, ಡಾ. ಡಿ. ವರದರಾಜ, ಪ್ರೊ.ಕೆ.ಆರ್.ಶಿಲ್ಪಾ ಮತ್ತಿತರರು ಇದ್ದರು.

-----------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net