ಮಾರಿಗುಡಿ ಪಪೂ ಕಾಲೇಜ್ ಕಟ್ಟಡ ಕಾಮಗಾರಿಗೆ ಚಾಲನೆ

1sirsi1
Published on

ಶಿರಸಿ: ಮಂಜೂರಾದ 8 ವರ್ಷಗಳಿಂದ ಎರವಲು ಕಟ್ಟಡದಲ್ಲಿ ನಡೆಯುತ್ತಿದ್ದ ಇಲ್ಲಿನ ಮಾರಿಗುಡಿ ಪದವಿಪೂರ್ವ ಕಾಲೇಜಿಗೆ ನೂತನ ಕಟ್ಟಡ ಮಂಜೂರಾಗಿದ್ದು, ಮಂಗಳವಾರ ವಿಧಾನಸಭಾಧ್ಯಕ್ಷರು ಕಾಮಗಾರಿಗೆ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾಲೇಜು ಶಿಕ್ಷಣ ಇಲಾಖೆಯ ಅಪೆಂಡಿಕ್ಸ್- ಇ ಯೋಜನೆಯಡಿ ಕಟ್ಟಡ ಕಾಮಗಾರಿಗೆ 1.24 ಕೋಟಿ ರೂ. ಮಂಜೂರಾಗಿದ್ದು, ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಮಾರಿಕಾಂಬಾ ದೇವಾಲಯದ ಸಮೀಪ ಯಾವುದೇ ಕಾಲೇಜುಗಳಿರಲಿಲ್ಲ. ಪ್ರಸ್ತುತ ಮಾರಿಗುಡಿ ಶಾಲೆಗೆ ಸೇರಿದ ಜಾಗದಲ್ಲೇ ಕಾಲೇಜು ನಿರ್ವಿುಸಲು ಅವಕಾಶ ನೀಡಿರುವ ಕಾರಣ ಅನುಕೂಲವಾಗಿದೆ. ಹಲವು ವರ್ಷಗಳಿಂದ ಈ ಕಾಲೇಜು ಎರವಲು ಕಟ್ಟಡದಲ್ಲಿ ನಡೆಯುತ್ತಿತ್ತು. ಆದರೆ, ಅಲ್ಲಿಯೂ ಸಮಸ್ಯೆ ಆದ ಕಾರಣ ಮಾರಿಗುಡಿ ಶಾಲೆ ಬಳಿ ನೂತನ ಕಟ್ಟಡ ನಿರ್ವಿುಸಲು ಕ್ರಮವಹಿಸಲಾಗಿದೆ ಎಂದರು. ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ರಮೇಶ ನಾಯಕ, ನಿರ್ವಿುತಿ ಕೇಂದ್ರದ ಅಧಿಕಾರಿ ಕುಮಾರ, ಗುತ್ತಿಗೆದಾರ ಶ್ಯಾಮಸುಂದರ ಭಟ್ಟ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net