

ಚಿತ್ರದುರ್ಗ: ತಾಲೂಕಿನ ಇಂಗಳದಾಳ್ ಗ್ರಾಮದ ಶಕ್ತಿದೇವತೆ ಮಾರಿಕಾಂಬ ದೇವಿಯ ನೂತನ ರಥ ಶುಕ್ರವಾರ ಶಾಸ್ತ್ರೋಕ್ತವಾಗಿ ಲೋಕಾರ್ಪಣೆಯಾಯಿತು.
ರಥ ಶುದ್ಧಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ನಂತರ ಗಣಪತಿ, ಗಂಗಾಪೂಜೆ, ಪುಣ್ಯಹಾ, ಪಂಚಗವ್ಯ ಶುದ್ಧಿ, ಕೂಷ್ಮಂಡ, ಅನ್ನ ಬಲಿ, ಮಹಾಮಂಗಳಾರತಿ ನಡೆಯಿತು.
ನಾಯಕನಹಟ್ಟಿಯ ಶಿಲ್ಪಿ ತಿಪ್ಪೇಸ್ವಾಮಿ ರಥ ನಿರ್ಮಿಸಿದ್ದು, ಅದರೊಳಗೆ ದೇವಿ ಪ್ರತಿಷ್ಠಾಪಿಸಲು ಆಸನ, ಸುತ್ತಲೂ ವಿವಿಧ ವಿನ್ಯಾಸದ ಚಿತ್ರಗಳನ್ನು ಕೆತ್ತಿದ್ದಾರೆ. ಹೀಗಾಗಿ ಅತ್ಯಂತ ಆಕರ್ಷಕವಾಗಿ ಮೂಡಿಬಂದಿದೆ.
ಜಿಲ್ಲೆಯ ವಿವಿಧ ಭಾಗಗಳ ಸಾವಿರಾರು ಭಕ್ತರು ಪೂಜಾ ಕೈಂಕರ್ಯ ಹಾಗೂ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಗ್ರಾಮದ ಮುಖಂಡರಾದ ಜಿ.ತಿಪ್ಪೇಸ್ವಾಮಿ, ರವಿಕೀರ್ತಿ, ಗೌಡ್ರು ಓಬಣ್ಣ, ಬಿ.ಎಂ.ಗಿರಿಯಪ್ಪ, ಪಿ.ಒ.ತಿಮ್ಮಣ್ಣ, ಪಿ.ಕೆ.ರಾಮಣ್ಣ, ಕೆ.ಟಿ.ಗಾದ್ರಪ್ಪ, ಜಿ.ಟಿ.ಮಹಂತೇಶ್, ಬಿ.ಅಶೋಕ್, ಹನುಮಣ್ಣ, ಎಸ್.ರಮೇಶ್, ತಳವಾರ್ ಮಹಂತೇಶ್, ಸಣ್ಣಪ್ಪ, ಬೆಂಗಳೂರು ನಾಗರಾಜ್, ಜಿ.ಟಿ.ಗುರುರಾಜ್, ಶೇಖರಣ್ಣ, ಎಚ್.ಉಮೇಶ್, ಎಚ್.ನಾಗರಾಜ್ ಇತರರಿದ್ದರು.