ಮಾರಿಕಾಂಬ ದೇವಿ ನೂತನ ರಥ ಉದ್ಘಾಟನೆ ಇಂದು

Marikambadevi
Published on

ಚಿತ್ರದುರ್ಗ: ತಾಲೂಕಿನ ಇಂಗಳದಾಳ್ ಗ್ರಾಮದ ಶಕ್ತಿದೇವತೆ ಮಾರಿಕಾಂಬ ದೇವಿಯ ನೂತನ ರಥ ಉದ್ಘಾಟನೆ ಕಾರ್ಯಕ್ರಮ ನ. 10ರಂದು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 11.45ರಿಂದ 1ರವರೆಗೆ ನೂತನ ರಥ ಶುದ್ಧಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಲಿದೆ. ನಂತರ ಗಣಪತಿ, ಗಂಗಾ ಪೂಜೆ, ಪುಣ್ಯಹಾ, ಪಂಚಗವ್ಯ ಶುದ್ಧಿ, ಕೂಷ್ಮಂಡ, ಅನ್ನ ಬಲಿ, ಮಹಾಮಂಗಳಾರತಿ ನಡೆಯಲಿದೆ.

ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಲಿದ್ದು, ಅನ್ನಸಂತರ್ಪಣೆ ಆಯೋಜಿಸಲಾಗಿದೆ. ದೇವಿಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಇಂಗಳದಾಳ್ ಗ್ರಾಮಸ್ಥರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net