ಮಾರಮ್ಮ ದೇವರ ತೆಪ್ಪೋತ್ಸವ ಅದ್ದೂರಿ

13
Published on

ಮಧುಗಿರಿ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಶೆಟ್ಟಿಹಳ್ಳಿ ಮಾರಮ್ಮ ದೇವರ ತೆಪ್ಪೋತ್ಸವ ಮಂಗಳವಾರ ಮರಬಳ್ಳಿ ಕೆರೆಯಲ್ಲಿ ಯಶಸ್ವಿಯಾಗಿ ಅಪಾರಭಕ್ಕರ ಸಮ್ಮುಖದಲ್ಲಿ ನಡೆಯಿತು.

ಶೆಟ್ಟಿಹಳ್ಳಿಯ ಮರಬಳ್ಳಿಕೆರೆ ತುಂಬಿದರೆ ಶೆಟ್ಟಿಹಳ್ಳಿ ಮಾರಮ್ಮನ ತೆಪ್ಪೋತ್ಸವ ನಡೆಯುವುದು ವಾಡಿಕೆ. ಅದರಂತೆ 4 ವರ್ಷಗಳ ನಂತರ ಕೆರೆ ತುಂಬಿ ಕೋಡಿ ಹರಿದಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ತೆಪೋತ್ಸವ ನಡೆಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮರಬಳ್ಳಿ, ಶೆಟ್ಟಿಹಳ್ಳಿ, ಪೆಮ್ಮಯ್ಯನಪಾಳ್ಯ, ಮಾಡಗಾನಹಟ್ಟಿ, ಸ್ವಾಗೇನಹಳ್ಳಿ, ವೀರಣ್ಣನ ತಾಂಡ, ರಂಗನಹಳ್ಳಿ, ಬಾಲೆನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

ತೆಪ್ಪೋತ್ಸವ ನಡೆಯುವದರಿಂದ ಪ್ರತಿ ವರ್ಷ ಉತ್ತಮ ಮಳೆ ಬೆಳೆ ಜತೆಗೆ ಕಾಯಿಲೆ ಮುಕ್ತ, ಸರ್ವ ಜನೊ ಸುಖಿನೋ ಭವಂತು ಹಾಗೂ ಲೋಕಕಲ್ಯಾಣಾರ್ಥವಾಗಿರಲೆಂದು ನಂಬಿಕೆ ಪ್ರತಿಯೊಬ್ಬ ಭಕ್ತರಲ್ಲೂ ಇದೆ. ನೂರಾರು ಭಕ್ತರು ಜಮಾಯಿಸಿ ಈ ತೆಪ್ಪೋತ್ಸವವನ್ನು ವೀಸಿದರು. ನಂತರ ಎಲ್ಲರಿಗೂ ಪ್ರಸಾದ ವಿತರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net