

ಹನೂರು: ಪ್ರತಿಯೊಬ್ಬರಿಗೂ ದೇವರು ಒಳಿತನ್ನು ಕರುಣಿಸಲಿ ಹಾಗೂ ಧಾರ್ಮಿಕ ಪ್ರವಾಸವು ಸುಖಕರವಾಗಿರಲಿ ಎಂದು ಶಾಸಕ ಆರ್.ನರೇಂದ್ರ ಆಶಿಸಿದರು.
ತಾಲೂಕಿನ ಬಿದರಹಳ್ಳಿ ಗ್ರಾಮದ ಮಾರಮ್ಮ ದೇಗುಲಕ್ಕೆ ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಓಂ ಶಕ್ತಿ ವ್ರತಧಾರಿಗಳನ್ನು ಕುರಿತು ಮಾತನಾಡಿದರು.
ಹನೂರು ಭಾಗದಲ್ಲಿ ಪ್ರತಿ ವರ್ಷ ಮೇಲ್ ಮರೂವತ್ತೂರಿನ ಓಂ ಶಕ್ತಿ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಕೋವಿಡ್ ಹಿನ್ನೆಲೆಯಲ್ಲಿ 2 ವರ್ಷದಿಂದ ತೆರಳಲು ಸಾಧ್ಯವಾಗಿರಲಿಲ್ಲ. ಇದೀಗ ಈ ಭಾಗದಿಂದ ವ್ರತಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದು ಸಂತಸದ ವಿಷಯ. ಹಾಗಾಗಿ ಸರ್ವರಿಗೂ ಒಳಿತಾಗಲಿ ಎಂದು ತಿಳಿಸಿದರು.
ಸಂತಾಪ ವ್ಯಕ್ತ: ಬಳಿಕ ಮಾರ್ಟಳ್ಳಿ ಗ್ರಾಮದ ಚರ್ಚ್‌ಗೆ ತೆರಳಿದ ಶಾಸಕರು, ಕಾಂಗ್ರೆಸ್‌ನ ಹಿರಿಯ ಮುಖಂಡ ರಾಸಪ್ಪನ್ ಗೌಂಡರ್ ಅವರ ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು. ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದರು.
ತಾಪಂ ಮಾಜಿ ಸದಸ್ಯ ಜಾವದ್ ಆಹಮದ್, ಗ್ರಾಪಂ ಉಪಾಧ್ಯಕ್ಷ ರಾಮಲಿಂಗಂ, ಮುಖಂಡರಾದ ಮಹದೇವಪ್ರಸಾದ್, ಮಣಿ, ಸುರೇಶ್, ಇನಾಸಿಮುತ್ತು ಇನ್ನಿತರರು ಇದ್ದರು.