ಮಾರನಾಳ ಗ್ರಾಮಕ್ಕಿಲ್ಲ ಶುದ್ಧ ಕುಡಿವ ನೀರು

oplus_131074
oplus_131074
Published on

ಕೊಡೇಕಲ್: ನೀರು ಶುದ್ಧೀಕರಣ ಘಟಕ ಕೆಟ್ಟು ಹೋಗಿ ಮೂರು ವರ್ಷವಾದರೂ ಕೂಡ ಅಧಿಕಾರಿಗಳ ನಿರ್ಲಕ್ಷÈದಿಂದಾಗಿ ಸಮೀಪದ ಮಾರನಾಳ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ಇಲ್ಲದಂತಾಗಿದೆ.

ಗ್ರಾಪA ಕೇಂದ್ರಸ್ಥಾನವಾದ ಮಾರನಾಳ ಗ್ರಾಮದ ಜಲಮೂಲದಲ್ಲಿ ಮಾರಣಾಂತಿಕ ಆರ್ಸೆನಿಕ್ ಅಂಶ ಕಂಡು ಬಂದ ಕಾರಣ ಜಿಲ್ಲಾಡಳಿತ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕವೊಂದು ಸ್ಥಾಪಿಸಿದ್ದು, ಆದರೆ ಕಳೆದ ಮೂರು ವರ್ಷದಿಂದ ಕೆಟ್ಟು ಹೋಗಿದ್ದು ಗ್ರಾಮದ ಜನರು ಅನಿವರ‍್ಯವಾಗಿ ಅಶುದ್ಧ ನೀರೆ ಕುಡಿಯುವುದು ಅನಿವಾರ್ಯ. ಆದರೆ ಗ್ರಾಮದಲ್ಲಿ ರೋಗದ ಭೀತಿ ಆವರಿಸಿದೆ.

ಕಳೆದ ೧೨ ವರ್ಷಗಳ ಹಿಂದೆ ಗ್ರಾಮದ ಜನರಿಗೆ ಚರ್ಮ ರೋಗ ಸೇರಿದಂತೆ ಕೆಲ ರೋಗಗಳು ಭಾದಿಸತೊಡಗಿದ್ದ ಕಾರಣ ಗ್ರಾಮದ ಜಲ ಮೂಲ ಪರೀಕ್ಷೆ ಮಾಡಿದ್ದರಿಂದ ಈ ಜಲ ಮೂಲದಲ್ಲಿ ಜೀವಕ್ಕೆ ಮಾರಕವಾದ ಆರ್ಸೆನಿಕ್ ಅಂಶ ಕಂಡು ಬಂದ ಕಾರಣ ಗ್ರಾಮದಲ್ಲಿರುವ ಕೆಲ ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ನಿಷೇಧಿಸಿದ ಜಿಲ್ಲಾಡಳಿತ ಸರ್ಕಾರಿ ಶಾಲೆ ಬಳಿಯೊಂದು ಕೊಳವೆಬಾವಿ ಕೊರೆಸಿ ನೀರು ಶುದ್ಧೀಕರಣ ಘಟಕ ಸ್ಥಾಪಿಸುವ ಮೂಲಕ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೆಲ ವರ್ಷಗಳ ಕಾಲ ಚನ್ನಾಗಿ ನಡೆದ ಈ ಆರ್‌ಒ ಘಟಕ ಕೆಲ ದಿನ ಕಳೆದಂತೆ ನಿರ್ವಹಣೆ ಕೊರತೆ ಮತ್ತು ಕೆಲ ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿದೆ ಸ್ಥಗಿತಗೊಂಡಿದೆ. ಆದರೆ ಈವರೆಗೆ ಗ್ರಾಮ ಪಂಚಾಯಿತಿ ತಲೆಕೆಡಿಸಿಕೊಳ್ಳದ ಜನರು ಅಶುದ್ಧ ನೀರು ಕುಡಿಯುವಂತ ಅನಿವಾರ್ಯ ಈಗ ಎದುರಾಗಿದೆ. ಆರಂಭದ ದಿನದಲ್ಲಿ ಕೂಡಲೇ ಘಟಕ ದುರಸ್ತಿ ಮಾಡುವಂತೆ ಅನೇಕ ಬಾರಿ ಗ್ರಾಪಂಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಘಟಕದ ಸುತ್ತಲು ಮುಳ್ಳು ಕಂಟಿ ಬೆಳೆದು ದುಸ್ಥಿತಿಯತ್ತ ತಲುಪಿದೆ.

ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮತ್ತು ಸಂಬAಧಿಸಿದ ಮೇಲಧಿಕಾರಿಗಳ ದಿವ್ಯ ನಿರ್ಲಕ್ಷÈದಿಂದಾಗಿ ಜನತೆ ಗ್ರಾಮದಲ್ಲಿನ ಆರ್ಸೆನಿಕ್ ಅಂಶವುಳ್ಳ ನೀರು ಕುಡಿಯುವಂತಾಗಿದೆ. ಹಾಗೊಂದು ವೇಳೆ ಜನತೆಗೆ ಮುಂದೆನಾದರೂ ಆದರೆ ಅದಕ್ಕೆ ಗ್ರಾಮ ಪಂಚಾಯಿತಿ ಮತ್ತು ಸಂಬAಧಿಸಿದ ಮೇಲಧಿಕಾರಿಗಳ ಇದಕ್ಕೆ ಹೊಣೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net