

ಕಲಬುರಗಿ: ವೈಯಕ್ತಿಕ ಕಾರಣಕ್ಕೆ ಪತ್ನಿಯ ಸಮ್ಮುಖದಲ್ಲೇ ಪತಿಯನ್ನು ಮಾರಕಾಸ್ತçಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಹೊರವಲಯದ ಕೆಸರಟಗಿ ಬಳಿ ಶನಿವಾರ ಸಂಜೆ ನಡೆದಿದೆ. ಕೆಸರಟಗಿ ಗ್ರಾಮದ ಕಪಿಲ್ ಗಾಯಕವಾಡ್ (೩೮) ಕೊಲೆಯಾದ ವ್ಯಕ್ತಿ. ಸೆಂಟ್ರಿAಗ್ ಕೆಲಸ ಮುಗಿಸಿಕೊಂಡು ಕೆಸರಟಗಿಗೆ ಹೋಗುವಾಗ ಮಾರ್ಗಮಧ್ಯೆ ಕೆಸರಟಗಿ ಬಳಿಯ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ನಿಲ್ಲಿಸಿದ ದುಷ್ಕರ್ಮಿಗಳು ಪತ್ನಿಯ ಎದುರಿನಲ್ಲೇ ಮಾರಕಾಸ್ತçಗಳಿಂದ ಹಲ್ಲೆ ನಡೆಸಿದ್ದು, ಸ್ಥಳದಲ್ಲಲಿಯೇ ಕಪಿಲ್ ಮೃತಪಟ್ಟಿದ್ದಾನೆ. ಪತ್ನಿ ಭಾಗ್ಯ ವಿರುದ್ಧ ಕುಟುಂಬಸ್ಥರು ಕೊಲೆ ಆರೋಪದಡಿ ದೂರು ನೀಡಿದ್ದು, ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ವೈಯಕ್ತಿಕ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.