ಮಾರಕಾಸ್ತ್ರ ಹಿಡಿದು ಪೋಸ್ ಕೊಟ್ಟವನ ವಿರುದ್ಧ ಪ್ರಕರಣ ದಾಖಲು

police 2
ಸಾಂದರ್ಭಿಕ ಚಿತ್ರ
Published on

ಹಾಸನ: ಮಾರಕಾಸ್ತ್ರವನ್ನು ಹಿಡಿದು ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅಪರಿಚಿತ ಯುವಕನ ವಿರುದ್ಧ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯುವಕನೊಬ್ಬ ಹಾಸನದ 80 ಅಡಿ ರಸ್ತೆಯಲ್ಲಿ ಕೈಯಲ್ಲಿ ಹರಿತವಾದ ಮಾರಕಾಸ್ತ್ರವನ್ನು ಹಿಡಿದು ಕಾರಿನ ಟಾಪ್ ನಲ್ಲಿ ಕುಳಿತುಕೊಂಡ, ನಿಂತುಕೊಂಡ ವಿವಿಧ ಭಂಗಿಯಲ್ಲಿ ಮತ್ತು ಕಾರಿನ ಪಕ್ಕದಲ್ಲಿ ನಿಂತುಕೊಂಡು ಮಾರಕಾಸ್ತ್ರವನ್ನು ಹಿಡಿದುಕೊಂಡು, ಸಿಗರೇಟು ಸೇದುತ್ತಾ ವಿವಿಧ ಭಂಗಿಯಲ್ಲಿ ಫೋಟೋ ತೆಗೆಸಿಕೊಂಡಿದ್ದ. ಈ ಫೋಟೋಗಳನ್ನು ಶುಕ್ರವಾರ ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದ.

ಸಾರ್ವಜನಿಕರಿಗೆ ತೊಂದರೆಯಾಗುವ ಹಾಗು ಭಯಪಡಿಸುವ ರೀತಿಯಲ್ಲಿ ನಿಂತುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರಿಂದ ಅಪರಿಚಿತ ಯುವಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ಇನ್ಸೆಪೆಕ್ಟರ್ ಮಧು ಅವರು ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net