ಮಾರಕಾಸ್ತ್ರ ಹಿಡಿದು ಗಲಾಟೆ ಮಾಡುತ್ತಿದ್ದ ಮೂವರ ಬಂಧನ

arrested
Published on

ಮೈಸೂರು: ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಗಲಾಟೆ ಮಾಡುತ್ತಿದ್ದ ಆರೋಪದಡಿ ನಗರದ ಎನ್.ಆರ್. ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಕುರಿಮಂಡಿ ನಿವಾಸಿ ಶಕೀಲ್(26), ಉದಯಗಿರಿಯ ಮೊಹಮ್ಮದ್ ರಫಿ(29) ಹಾಗೂ ಶಾರೀಕ್(25) ಎಂಬಾತರನ್ನು ವಶಕ್ಕೆ ಪಡೆದಿದ್ದು, ಮೊಹಮ್ಮದ್ ಸಲೀಂ ಎಂಬಾತ ಪರಾರಿಯಾಗಿದ್ದಾನೆ.

ಸ್ಥಳದಲ್ಲಿದ್ದ ಕಾರ್ ಹಾಗೂ ಲಾಂಗ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕುರಿಮಂಡಿಯ 1ನೇ ಕ್ರಾಸ್‌ನಲ್ಲಿ ಈ ಮೂವರೂ ಲಾಂಗ್ ಹಿಡಿದು ಗಲಾಟೆ ಮಾಡಿಕೊಂಡು, ಸಾರ್ವಜನಿಕರನ್ನು ಭಯಪಡಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು, ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಪೊಲೀಸರ ಗರುಡಾ ವಾಹನವನ್ನು ಕಂಡು ಮೊಹಮ್ಮದ್ ಸಲೀಂ ಓಡಿ ಹೋಗಿದ್ದು, ಮೂವರು ಸಿಕ್ಕಿ ಬಿದ್ದಿದ್ದಾರೆ.ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net