ತಿಪಟೂರು: ನಗರದ ವಿವಿಧ ಬಡಾವಣೆಗಳಲ್ಲಿ ಕಳ್ಳರ ಗುಂಪೊಂದು ಮುಸುಕುಧಾರಿಗಳಾಗಿ, ಕೈಯಲ್ಲಿ ಮಾರಕಾಸಗಳನ್ನು ಹಿಡಿದು ಕಳ್ಳತನಕ್ಕೆ ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಶನಿವಾರ ಸೆರೆಯಾಗಿದೆ. ಜೂನ್ 21 ರಂದು ತುಮಕೂರಿನಲ್ಲಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮದ ಬಂದೋಬಸ್ತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತೆರಳಿರುವುದನ್ನು ಗಮನಿಸಿದ ಕಳ್ಳರು, ನಗರದ ಸಿದ್ದರಾಮೇಶ್ವರ ಬಡಾವಣೆ. ಶಾರದಾನಗರ, ಸೇರಿ ಹಲವು ಬಡಾವಣೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಆಗಂತುಕರ ಚಲನ, ವಲನಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಕಳ್ಳರನ್ನು ಸೆರೆಹಿಡಿಯಲು ಅಗತ್ಯ ಕ್ರಮ ವಹಿಸಲಾಗಿದ್ದು. ನಗರದೆಲ್ಲೆಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ ಡಿವೈಎಸ್ಪಿ ವಿನಾಯಕ ಎನ್ ಶಟಗೇರಿ ತಿಳಿಸಿದ್ದಾರೆ.