ಮಾರಕ ಸುತ್ತೋಲೆಗೆ ಆಕ್ಷೇಪ-ಬೀದಿಗಿಳಿದ ಪಿಂಚಣಿದಾರರು

pin-1.jpg
Published on

ದಾವಣಗೆರೆ: ಸುಪ್ರೀಂಕೋರ್ಟ್‌ನ ಆದೇಶ ಧಿಕ್ಕರಿಸಿ ಅನುಕೂಲಕ್ಕೆ ತಕ್ಕಂತೆ ಮಾರಕ ಸುತ್ತೋಲೆ ಹೊರಡಿಸಲಾಗಿದೆ ಎಂದು ಆರೋಪಿಸಿ ಪಿಂಚಣಿದಾರರು ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮಂಗಳವಾರ ದಾವಣಗೆರೆಯ ಭವಿಷ್ಯ ನಿಧಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

30 ವರ್ಷಕ್ಕೂ ಹೆಚ್ಚು ಕಾಲ ಸರ್ಕಾರಿ, ಸಾರಿಗೆ ಸಂಸ್ಥೆ ಇತರಡೆ ಕೆಲಸ ಮಾಡಿ ನಿವೃತ್ತರಾದವರು ಅತಿ ಕಡಿಮೆ ಪ್ರಮಾಣದ ಪಿಂಚಣಿಯಲ್ಲಿ ನಿವೃತ್ತಿ ಜೀವನ ನಿರ್ವಹಣೆ ಮಾಡುವುದು ಸಮಸ್ಯೆಯಾಗಿದೆ. ಸರಾಸರಿ ಏಳೂವರೆ ಸಾವಿರ ಪಿಂಚಣಿ ನೀಡಬೇಕು. ಮರಣ ಹೊಂದಿದ ನಿವೃತ್ತರ ಪತ್ನಿಯರಿಗೆ ಪೂರ್ಣ ಪ್ರಮಾಣದ ಪಿಂಚಣಿ ವಿತರಣೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಗೌರವಯುತ ಜೀವನ ನಡೆಸಲು ಅನುಕೂಲವಾಗುವಂತೆ ಪಿಂಚಣಿ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗಾಗಿ ಒಂದು ವಾರದಲ್ಲಿ ಸುತ್ತೋಲೆ ಹೊರಡಿಸಬೇಕು.ತಮಗೆ ಬೇಕಾದಂತೆ ಸುತ್ತೋಲೆ ಹೊರಡಿಸುವುದು ಸರಿಯಲ್ಲ ಎಂದರು.

ಸಮಿತಿಯ ಜಿಲ್ಲಾ ಸಂಚಾಲಕ ಎಂ. ಶಾಂತಪ್ಪ, ಕೆ.ಎಂ. ಮರುಳಸಿದ್ದಯ್ಯ ನಾಗರಾಜ್, ಚಂದ್ರಪ್ಪ, ರುದ್ರಪ್ಪ, ಸಂಗಪ್ಪ, ಗಂಗಾಧರ್, ಡಿ.ಎಚ್. ಶೆಟ್ಟರ್, ಗುರುಮೂರ್ತಿ, ವಿಶ್ವನಾಥಯ್ಯ, ನಾರಾಯಣ ಶಿಂಧೆ, ಕೆ. ನಾಗಪ್ಪ ಇತರರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net