

ಮೈಸೂರು: ಒಂದೇ ಸೂರಿನಡಿ ಗೃಹ, ಗೃಹೇತರ ವಸ್ತುಗಳು ಪ್ರದರ್ಶನ ಹಾಗೂ ಮಾರಾಟದ ಮಾನ್‌ಸೂನ್ ಶಾಪಿಂಗ್ ಫೆಸ್ಟಿವಲ್ ‘ಗೃಹಶೋಭೆ’ ಗೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆ.27ರ ವರೆಗೆ ಆಯೋಜಿಸಿರುವ 16 ದಿನಗಳ ಮೇಳ ಉದ್ಘಾಟಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಗೃಹಶೋಭೆ ವಸ್ತು ಪ್ರದರ್ಶನದಲ್ಲಿ ಮನೆಗೆ ಬೇಕಾಗುವ ವಸ್ತುಗಳು ಒಂದೇ ಸೂರಿನಡಿ ದೊರೆಯುತ್ತವೆ. ಒಂದೊಂದು ವಸ್ತುಗಳನ್ನು ಖರೀದಿಸಲು ಬೇರೆ ಬೇರೆ ಕಡೆಗೆ ಹುಡುಕಬೇಕು. ಆದರೆ ಇಲ್ಲಿ ಭೇಟಿ ನೀಡಿದರೆ ತಮಗೆ ಇಷ್ಟವಾದ ವಸ್ತುಗಳನ್ನು ಒಂದೇ ನೋಡಲು ಹಾಗೂ ಖರೀಸಬಹುದು. ರಿಯಾಯಿತಿ ಕೂಡಾ ಇದೆ ಎಂದರು.
ರೂಪದರ್ಶಿ ತನಿಷ್ಕಾಮೂರ್ತಿ ಟೇಪು ಕತ್ತರಿಸಿ ಮಾತನಾಡಿ, ವಸ್ತು ಪ್ರದರ್ಶನ ಆಕರ್ಷಕವಾಗಿದ್ದು, ಮನಮೆಚ್ಚುವಂತಿವೆ. ಹಲವರು ವರ್ಷದಿಂದ ಸಾಂಸ್ಕೃತಿಕ ನಗರದಲ್ಲಿ ಗೃಹಶೋಭೆ ನಡೆಸುತ್ತಿದ್ದು, ಮನೆ ಮಾತಾಗಿದೆ ಎಂದು ಹೇಳಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಶ್ ಜಿ.ಗೌಡ, ಗೃಹಶೋಭೆ ಆಯೋಜಕರಾದ ನಾಗಚಂದ್ರ ಇತರರು ಇದ್ದರು.