ಮಾನಸಿಕವಾಗಿ ಧೈರ್ಯ ತುಂಬಬೇಕು

bkt-10-3
ಬಾಗಲಕೋಟೆ ನಗರದ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ ರಾಷ್ಟಿçÃಯ ತಲಸ್ಸೇಮಿಯಾ ದಿನಾಚರಣೆ ಕಾರ್ಯಕ್ರಮ
Published on

ಬಾಗಲಕೋಟೆ: ತಲಸ್ಸೇಮಿಯಾ ರೋಗಕ್ಕೆ ತುತ್ತಾಗುವವರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ನೈತಿಕ ಬಲ, ವೈದ್ಯಕೀಯ ಚಿಕಿತ್ಸೆಯಿಂದ ಗುಣಮುಖರಾಗಲು ಸಾಧ್ಯವಿದೆ ಎಂದು ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪಲ್ಲವಿ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ ರಾಷ್ಟಿçÃಯ ತಲಸ್ಸೇಮಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನುವಂಶಿಕತೆಯಿAದ ಬರುವ ರಕ್ತದ ಅಸ್ವಸ್ಥತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ತಲಸ್ಸೇಮಿಯಾ ದಿನ ಪ್ರತಿ ವರ್ಷ ಮೇ ೮ ರಂದು ಆಚರಿಸುತ್ತಾ ಬರಲಾಗುತ್ತಿದೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಈ ಖಾಯಿಲೆಯಿಂದ ಬಳಲುತ್ತಿದ್ದು, ಅವರ ಬದುಕಿಗೆ ಬೆಂಬಲವಾಗಿ ನಿಂತು, ನೈತಿಕ ಸ್ಥೆÊರ್ಯ ತುಂಬುವ ಕೆಲಸದ ಜೊತೆಗೆ ಸೂಕ್ತ ಚಿಕಿತ್ಸೆ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆಯ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.

ತಲಸ್ಸೇಮಿಯಾ ಒಂದು ಅನುವಂಶಿಕವಾಗಿ ಹತ್ತಿರದ ರಕ್ತ ಸಂಬAಧಗಳ ಮಧ್ಯೆ ಮದುವೆ ಮಾಡುವುದರಿಂದ ಮಕ್ಕಳಿಗೆ ಬರಬಹುದಾದ ರಕ್ತದ ಖಾಯಿಲೆಯಾಗಿದೆ. ದೇಹವು ಹಿಮೋಗ್ಲೋಬಿನ್ ಎಂಬ ಪ್ರೋಟಿನ್‌ನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸದಿದ್ದರೆ ಉಂಟಾಗುವ ರಕ್ತದ ಅಸ್ವಸ್ಥತೆಯಾಗಿದೆ. ಈ ರೋಗದ ಪರಿಣಾಮ ಮಗುವಿನ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆ ಸರಿಯಾಗಿ ಆಗದೇ ಈ ಜೀವಕೋಶಗಳ ಜೀವಿತಾವಽಯು ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಮಕ್ಕಳಿಗೆ ಪ್ರತಿ ೨೧ ದಿನದ ನಂತರ ಕನಿಷ್ಠ ೧ ಯುನಿಟ್ ರಕ್ತದ ಅಗತ್ಯವಿರುತ್ತದೆ ಎಂದು ತಿಳಿಸಿದರು.

ತಲಸ್ಸೇಮಿಯಾ ರೋಗದ ಲಕ್ಷಣಗಳಾದ ನಿದ್ರಾವಸ್ಥೆ, ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ, ತಲೆ ಸುತ್ತುವಿಕೆ, ಮೂರ್ಚೆ ಹೋಗುವುದು, ಮಸುಕಾದ ಚರ್ಮ, ಕಾಮಾಲೆ ಅಲ್ಲದೇ ತೀವ್ರ ಪ್ರಕರಣಗಳಲ್ಲಿ ಮೂಳೆಗಳು ವಿರೂಪಗೊಳ್ಳುವುದು, ಕೆಲವೊಮ್ಮೆ ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು. ಈ ಖಾಯಿಲೆ ಇರುವ ಮಕ್ಕಳಿಗೆ ಜೀವಿತಾವಽಯಲ್ಲಿ ಎರಡು ಮೂರು ವಾರಗಳಿಗೆ ಒಮ್ಮೆ ರಕ್ತ ವರ್ಗಾವಣೆ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ರೋಗದ ತೀವ್ರತೆಯ ಆಧಾರದ ಮೇಲೆ ಚೇಲೆಶನ್ ಚಿಕಿತ್ಸೆ, ಅಸ್ಥಿಮಜ್ಜೆ ಕಸಿಗಳು, ಜೀನ್ ಚಿಕಿತ್ಸೆ, ಜಿಂಟೆಗ್ಲೋ ಅಂತಹ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.

ಭಾರತದಲ್ಲಿ ಸರಾಸರಿ ೩-೪ ಪ್ರತಿಶತ ಬಿ. ಥಲಸ್ಸೆಮಿಯಾ ವಾಹಕಗಳ ಹರಡುವಿಕೆ ಇದೆ. ಇದು ಭಾರತದ ಜನಸಂಖ್ಯೆಯಲ್ಲಿ ೩೫ ರಿಂದ ೪೫ ಮಿಲಿಯನ್ ವರೆಗೆ ಇರುತ್ತದೆ. ಇದಲ್ಲದೆ ಪ್ರತಿ ವರ್ಷ ೧೦,೦೦೦-೧೫,೦೦೦ ಮಕ್ಕಳು ತಲಸ್ಸೇಮಿಯಾದೊಂದಿಗೆ ಜನಿಸುತ್ತವೆ. ಹಾನಗಲ್ ಕುಮಾರೇಶ್ವರ ಆಸ್ಪತ್ರೆಯಲ್ಲಿ ೧೦೦ ಹಾಸಿಗೆಗಳ ಥಲಸ್ಸೆಮಿಯಾ ಘಟಕ ಹೊಂದಿದ್ದು, ಚಿಕಿತ್ಸೆಗೆ ಬರುವ ಎಲ್ಲ ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ಕಡಿಮೆ ವೆಚ್ಚದಲ್ಲಿ ಶಸ್ತç ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ದೀಲಿಪ್ ಎಸ್. ನಾಟೇಕಾರ ಮಾತನಾಡಿ, ಆರೋಗ್ಯ ಶುಶ್ರೂಷಕರು ಹಾಗೂ ಆರೋಗ್ಯ ಶುಶ್ರೂಷಾ ಬೋಧಕ ಸಿಬ್ಬಂದಿಗಳು ಸಮುದಾಯಕ್ಕೆ ಭೇಟಿ ನೀಡುತ್ತಿದ್ದಾರೆ. ತಲಸ್ಸೇಮಿಯಾ ರೋಗವನ್ನು ತಡೆಗಟ್ಟುವಿಕೆ, ಗುಣಪಡಿಸುವ ವಿಧಾನಗಳು, ರೋಗಿಗಳ ಆರೈಕೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ತಲಸ್ಸೇಮಿಯಾ ಬಾಽತ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆ ಮತ್ತು ಚಿಕಿತ್ಸೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮಹಾವಿದ್ಯಾಲಯದ ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ಸಹ ಪ್ರಾಧ್ಯಾಪಕ ಸಂತೋಷ ಸಜ್ಜನ, ಡಾ.ದಾನೇಶ್ವರಿ ಹಿರೇಮಠ, ಡಾ.ನಿಂಗನಗೌಡ ಜಿ. ಪಾಟೀಲ, ಡಾ.ಪ್ರಶಾಂತ ಕುಲಕರ್ಣಿ, ಸಂತೋಷ ಸಜ್ಜನ, ಚಂದ್ರಾ ಜತ್, ರೇಣುಕಾ ಜಾಲಿಹಾಳ, ಶ್ರೀದೇವಿ ತೇಲಿ ಉಪಸ್ಥಿತರಿದ್ದರು. ಬಸವರಾಜ ನಿರೂಪಿಸಿದರು. ನೇತ್ರಾವತಿ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net