ಮಾನಸಿಕ ರೋಗಿಗಳನ್ನು ಸಂತೈಸಿ

28-SanduruP2
Published on

ಸಂಡೂರು: ಮಾನಸಿಕವಾಗಿ ನೊಂದವರನ್ನು ಸತಾಯಿಸದೆ ಅವರ ಆರೋಗ್ಯದ ಕುರಿತು ಕಾಳಜಿ ತೋರಬೇಕೆಂದು ಪಟ್ಟಣದ ನ್ಯಾಯಾಲಯದ ಎಪಿಪಿ ವಡ್ರ ಅಣ್ಣೇಶಿ ಹೇಳಿದರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮಾನಸಿಕ ರೋಗಿಗಳನ್ನು ವೈದ್ಯರು ಒಳ್ಳೆಯ ಮಾತುಗಳಿಂದ ಸಂತೈಸಬೇಕು ಎಂದರು.

ಟಿಎಚ್‌ಒ ಭರತ್ ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಎಚ್.ಕುಮಾರಸ್ವಾಮಿ ಪೋಕ್ಸೊ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಅರಳಿ ಮಲ್ಲಪ್ಪ, ಉಪಾಧ್ಯಕ್ಷ ಕೆ.ಆರ್.ದಾದಾಪೀರ್, ಕಾನೂನು ಸೇವಾ ಸಮಿತಿ ಸದಸ್ಯರಾದ ಮಂಜುನಾಥಗೌಡ, ರೇಖಾ ಶಿವಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಬಂಡೇಗೌಡ, ಆಶಾ ಕಾರ್ಯಕರ್ತೆ ಪಾಪಮ್ಮ, ಸಿಎಚ್‌ಒ ಗಣೇಶ, ವಕೀಲ ಭರಮರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net