

ಚಿತ್ರದುರ್ಗ: ಕ್ರೀಡೆ ಮಾನಸಿಕ, ದೈಹಿಕ ಸದೃಢತೆಗೆ ಸಹಕಾರಿ ಎಂದು ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್ ಹೇಳಿದರು.
ನಗರದ ಕೆಎಂಎಸ್ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಸದಾ ಕ್ರಿಯಾಶೀಲತೆ, ನವಚೈತನ್ಯಕ್ಕೆ ಕ್ರೀಡೆ ನೆರವಾಗಲಿದೆ. ಪಠ್ಯಕ್ಕೆ ನೀಡುವ ಮಹತ್ವವನ್ನು ಕ್ರೀಡೆ ಮೊದಲಾದ ಪಠ್ಯೇತರ ಚಟುವಟಿಕೆಗಳಿಗೂ ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಷನ್ ಅಕಾಡೆಮಿ ಮುಖ್ಯಸ್ಥ ಲೋಕೇಶ್ ಮಾತನಾಡಿದರು. ಆಡಳಿತಾಧಿಕಾರಿ ಸಿ.ಪಿ. ಜ್ಞಾನದೇವ, ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯೆ ಜಯಲಕ್ಷ್ಮೀ, ಬಾಪೂಜಿ ಪದವಿ ಕಾಲೇಜು ಪ್ರಾಚಾರ್ಯೆ ಡಾ. ಮಂಜುಳಾ ಇತರರು ಇದ್ದರು.