ಮಾನಸಿಕ ಖಿನ್ನತೆಗೊಳಗಾಗಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

13 mlv 1 ಪೂರ್ಣಿಮಾ(20)
Published on

ಮಂಡ್ಯ: ಮಾನಸಿಕ ಖಿನ್ನತೆಯಿಂದ ವಿದ್ಯಾರ್ಥಿನಿಯೊಬ್ಬಳು ಕ್ರಿಮಿನಾಶಕ ಕಾಳುಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಳವಳ್ಳಿ ತಾಲೂಕಿನ ಮಂದಲಗಹಳ್ಳಿ ಗ್ರಾಮದ ನಾಗರಾಜಶೆಟ್ಟಿ ಅವರ ಪುತ್ರಿ ಪೂರ್ಣಿಮಾ(20) ಮೃತ ವಿದ್ಯಾರ್ಥಿನಿ. ಈಕೆ ಭಾರತಿ ನಗರ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದು, ಕೆಲ ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಬುಧವಾರ ರಾತ್ರಿ ಕೃಷಿ ಬೆಳೆಗೆ ಬಳಸುವ ಕ್ರಿಮಿನಾಶಕ ಕಾಳುಗಳನ್ನು ಸೇವಿಸಿ ನರಳಾಡುತ್ತಿದ್ದಾಗ ಕುಟುಂಬದವರು ಕೂಡಲೇ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರು ಚಿಕಿತ್ಸೆಗೆ ಫಲಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net