

ಯಾದಗಿರಿ : ಜಾಗತೀಕರಣದ ಇಂದಿನ ಭರಾಟೆಯಲ್ಲಿ ಮನುಷ್ಯ ಒತ್ತಡದ ಜೀವನ ನಡೆಸುತ್ತಿದ್ದು, ಇದನ್ನು ಹೋಗಲಾಡಿಸಲು ಇಂತಹ ಕ್ರೀಡಾಕೂಟ ಅಗತ್ಯವಾಗಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಪತ್ರಿಕಾ ದಿನಾಚರಣೆ ನಿಮಿತ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಆಯೋಜಿಸಿದ್ದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಇಂದಿನ ಹೈಬ್ರಿಡ್ ಯುಗದಲ್ಲಿ ನಾವು ತಿನ್ನುವ ಆಹಾರ ಸಹ ವಿಷವಾಗುತ್ತಿದೆ. ಮಾನಸಿಕ ಕ್ಷೆÆÃಭೆಗಳಿಂದ ಸಣ್ಣ ವಯಸ್ಸಿನಲ್ಲೇ ದೇಹ ದಣಿಯುತ್ತಿದೆ ಎಂದರು.
ಪತ್ರಕರ್ತರು ನಿತ್ಯ ಒತ್ತಡದಿಂದಲೇ ಜೀವನ ಸಾಗಿಸುತ್ತಾರೆ. ಸುದ್ದಿಗಳಿಗಾಗಿ ಪ್ರತಿP್ಷÀಣ ಸಹ ದಣಿಯದಂತೆ ದುಡಿಯುತ್ತಾರೆ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಖಿನ್ನತೆಗೆ ಒಳಗಾದ ಅನೇಕ ಉದಾಹರಣೆ ನಮ್ಮ ಮುಂದಿವೆ. ಮಾಧ್ಯದವರಿಗೆ ಪ್ರತಿವರ್ಷ ಪತ್ರಕರ್ತರ ಸಂಘದಿAದ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಶ್ಲಾಸಿದರು.
ಕಾಂಗ್ರೆಸ್ ಮುಖಂಡ ಡಾ.ಭೀಮಣ್ಣ ಮೇಟಿ ಮಾತನಾಡಿ, ಕ್ರೀಡೆಗಳಿಂದ ಮನುಷ್ಯ ದೈಹಿಕವಾಗಿ ಸದೃಢನಾಗುತ್ತಾನೆ. ಮಾನಸಿಕ ಒತ್ತಡದ ಶಮನಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದು ಹೇಳಿದರು.
ಸಂಘದ ಜಿಲ್ಲಾಧ್ಯP್ಷÀ ಮಲ್ಲಪ್ಪ ಸಂಕೀನ್, ಸಮಾಜಕ್ಕೆ ಬೆಳಕು ಚೆಲ್ಲುವ ಕಾರ್ಯದಲ್ಲಿ ನಿರತರಾದ ಬಹುತೇಕ ಪತ್ರಕರ್ತರ ಬದುಕು ಕತ್ತಲಾಗಿರುವುದು ವಾಸ್ತವಿಕ ಸತ್ಯ. ಹೀಗಾಗಿ ಸಂಘದಿAದ ಸಾಧ್ಯವಾದ ಮಟ್ಟಿಗೆ ಸಹಾಯ, ಸಹಕಾರ ನೀಡಲಾಗುತ್ತಿದೆ. ಮಾಧ್ಯಮದವರ ಅನುಕೂಲಕ್ಕಾಗಿ ಜಿಲ್ಲಾ ಪತ್ರಿಕಾ ಭವನದ ಮೊದಲ ಮಹಡಿಯಲ್ಲಿ ಕೋಣೆಗಳ ನಿರ್ಮಾಣ ಹಾಗೂ ವಡಗೇರಾ ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.
ಕ್ರೀಡಾಕೂಟದಲ್ಲಿ ಕ್ರಿಕೆಟ್, ಚೆಸ್, ಕಬಡ್ಡಿ, ಹಗ್ಗ ಜಗ್ಗಾಟ, ಕುರ್ಚಿ ಆಟ, ಶೆಟಲ್ ಸೇರಿ ಇನ್ನಿತರ ಕ್ರೀಡೆಗಳು ನಡೆದವು. ಮಹಿಳೆಯರಿಗಾಗಿ ಗುಂಡು ಎಸೆತ, ೧೦೦ ಮೀÃಟರ್ ಓಟ, ಚೆಸ್, ಹಗ್ಗಜಗ್ಗಾಟ ಹಾಗೂ ರಂಗೋಲಿ ಸ್ಪರ್ಧೆ ನಡೆಸಲಾಯಿತು.
ನಗರಸಭೆ ಸದಸ್ಯ ವೆಂಕಟರೆಡ್ಡಿ ವನಿಕೇರಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬೇವಿನಹಳ್ಳಿ, ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಕಾಮನಟಗಿ, ಸಿದ್ದು ಪಾಟೀಲ್ ಇದ್ದರು. ಲಕ್ಷ್ಮೀಕಾಂತ್ ಕುಲಕರ್ಣಿ ಸ್ವಾಗತಿಸಿದರು. ನರಸಪ್ಪ ನಾರಾಯಣೋರ ನಿರೂಪಿಸಿದರು. ವಿಶಾಲ ಶಿಂಧೆ ದೋರನಹಳ್ಳಿ ವಂದಿಸಿದರು.