

ಮಮದಾಪುರ: ಭಾರತದ ಪ್ರಾಚೀನ ಪರಂಪರೆಯಾಗಿರುವ ಯೋಗ ಪದ್ಧತಿ ಮಾನಸಿಕ, ದೈಹಿಕ ಹಾಗೂ ಒತ್ತಡ ಜೀವನ ಸದೃಢಗೊಳಿಸಲು ಅವಶ್ಯಕವಾಗಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕ ಡಾ.ಬಿ.ಎಂ.ಪಾಟೀಲ ಗುರೂಜಿ ಹೇಳಿದರು.
ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಕೆಪಿಎಸ್ ಶಾಲಾ ಅವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಕಮಿಟಿ, ಶ್ರೀ ಬಸವೇಶ್ವರ ವರ್ತಕರ ಸಹಕಾರ ಸಂಘ ಹಾಗೂ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನ ದೈನಂದಿನ ಜೀವನದಲ್ಲಿ ಉಲ್ಲಾಸ ಕಾರ್ಯ ಚಟುವಟಿಕೆಗೆ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಉನ್ನತಿ ಹೊಂದಲು ಯೋಗ ವಿಜ್ಞಾನದಿಂದ ಸಾಧ್ಯ ಎಂದರು.
ಗ್ರಾಮದ ಎಲ್ಲ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ನಂತರ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ವನಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭೀಮಶಿ ಭರಮಣ್ಣವರ, ಬಸಪ್ಪ ಹಮ್ಮಣಿ, ಸಿದ್ದನಗೌಡ್ರ ಪಾಟೀಲ, ಸಿದ್ದಪ್ಪ ದೇಸಾಯಿ, ಈಶ್ವರ ವಣ್ಣೂರ, ಶಿವಾನಂದ ಪಾಟೀಲ, ಆನಂದ ಜಗಜಂಪಿ, ಮಹಾಂತೇಶ ಬಡಿಗೇರ, ಶಿದ್ಲಿಂಗ ಕಡಬಿ, ಡಾ.ಎಂ.ಎಸ್.ಹರಕುಣಿ, ಡಾ.ಸಾವಿತ್ರಿ ಕಮಲಾಪುರ, ಎಸ್.ಬಿ.ನ್ಯಾಮಗೌಡ್ರ, ವಿವೇಕ ಕರಡಿ ಇತರರಿದ್ದರು.