ಮಾನಸಿಕ ಅಸ್ವಸ್ಥ ಬಾವಿಗೆ ಬಿದ್ದು ಸಾವು

Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಾನಸಿಕ ಅಸ್ವಸ್ಥ ವ್ಯಕ್ತಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಯಾದವಾಡ ಗ್ರಾಮದ ಹೊರವಲಯದಲ್ಲಿ ಸೋಮವಾರ ನಡೆದಿದೆ. ಶಿಬಾರಗಟ್ಟಿ ಗ್ರಾಮದ ಬಸವರಾಜ ಶಿವಪ್ಪ ಉಪ್ಪಾರ (26) ಮೃತ ವ್ಯಕ್ತಿ. ಈತ ಯಾದವಾಡ ಗ್ರಾಮದ ಕೊಯಪ್ಪನವರ ಎಂಬುವರ ಜಮೀನನಲ್ಲಿರುವ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net