ಮಾನಸಿಕ ಅನಾರೋಗ್ಯ ಹೆಚ್ಚಳ ಕಳವಳಕಾರಿ: ಕೆ. ಗುರುಪ್ರಸಾದ

10-gdg-2
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾ ಆಡಳಿತ,  ಜಿಲ್ಲಾ ಪಂಚಾಯಿತಿ,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ ವಿಭಾಗ, ಗದಗ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ, ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಸೋಮವಾರ ನಗರದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಾಗೃತಿ ರಥಕ್ಕೆ ಚಾಲನೆ ನೀಡಲಾಯಿತು. 
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿನಾದ್ಯಂತ ಮಾನಸಿಕ ಅನಾರೋಗ್ಯ ಹೆಚ್ಚಾಗುತ್ತಿದ್ದು ಕಳೆದ ದಶಕದಲ್ಲಿ ಶೇ. 13ರಷ್ಟು ಮಾನಸಿಕ ಅನಾರೋಗ್ಯ ಮತ್ತು ಮಾದಕ ವ್ಯಸನ ಸಮಸ್ಯೆಗಳು ಹೆಚ್ಚಾಗುತ್ತಿದೆ. ಜಗತ್ತಿನ ಶೇ. 20ರಷ್ಟು ಮಕ್ಕಳು ಮತ್ತು ಯುವ ಜನತೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದು ಅದರಲ್ಲಿ 15ರಿಂದ 29 ವಯೋಮಾನದವರಲ್ಲಿ ಆತ್ಮ ಹತ್ಯೆ ಹೆಚ್ಚಾಗಿದೆ ಎಂದರು.

 ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ, ಮಾನಸಿಕ ಖಾಯಿಲೆಯಲ್ಲಿ 9 ಪ್ರಕಾರಗಳಿದ್ದು ಚಿತ್ತ ವಿಕಲತೆ, ಖಿನ್ನತೆ, ಆತಂಕ, ಉನ್ಮಾದ ಮನೋರೋಗ, ಗೀಳು ಮನೋರೋಗ, ಮನೋದೈಹಿಕ ಖಾಯಿಲೆ, ಮಾದಕ ವಸ್ತು ಸೇವನೆ ಹೀಗೆ 9 ಪ್ರಕಾರದ ಖಾಯಿಲೆಗಳಿವೆ. ಇಂತಹ ಎಲ್ಲ ಖಾಯಿಲೆಗಳಿಗೂ  ಮಾನಸಿಕ ಸಮಾಲೋಚನೆ ಚಿಕಿತ್ಸೆಗಳನ್ನು ಇಲಾಖೆಯಿಂದ ಮಾನಸಿಕ ಆರೋಗ್ಯ ತಜ್ಞರಿಂದ ಪ್ರತಿ ವಾರ ಎಲ್ಲಾ ತಾಲೂಕುಗಳಲ್ಲಿ ಸೇವೆಯನ್ನು ಒದಗಿಸಲಾಗುತ್ತಿದೆ.  ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. .    
  ಡಾ ಪ್ಯಾರ ಅಲಿ ನೂರಾನಿ ಮಾತನಾಡಿದು.  ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ ಪ್ರೀತ ಖೋನಾ,  ಡಾ ಅಮೃತ ಹರಿದಾಸ, ಡಾ ಸಿ.ಎಸ್. ಹೊಸಮಠ,  ರೂಪಸೇನ ಚವ್ಹಾಣ,  ಉಮೇಶ ಕರಮುಡಿ, ಗೀತಾ ಕಾಂಬಳೆ, ಪ್ರಭು ಹೊನಗುಡಿ,  ಎಸ್.ಎಸ್.ಕುಬಸದ, ವಿ.ಜಿ ಲಿಂಬಿಕಾಯಿ,  ವಿನಾಯಕ ಕಾಳೆ, ವಿನಾಯಕ ವಾಗಮೋರೆ, ಶೋಭಾ ವಡ್ಡರ, ನೂತನ ಹೊಸಮನಿ, ಶಿರಸ್ತೇದಾರ ಬಿ.ಎಂ.ಕುಕನೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net