ಮಾನಸ ಗಂಗೋತ್ರಿ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ

Trek to Srishaila from 12
Invitation to a poetry competition
Published on

ವಿಜಯಪುರ : ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ಹಾಗೂ ಚೆನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರಗಳ ಮಾದರಿಯಂತೆ ತಿಡಗುಂದಿಯ ಮಾನಸ ಗಂಗೋತ್ರಿ ವಸತಿ ಶಾಲೆಯಲ್ಲಿ 5ನೇ ತರಗತಿಗೆ ಮತ್ತು ಪಿಯುಸಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಶಿಣಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಗಳಿಗೆ ಪ್ರವೇಶ ಪರೀೆಗಳನ್ನು ನಡೆಸುವ ಮೂಲಕ ಅರ್ಹತೆ ಆಧಾರದ ಮೇಲೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕನ್ನಡ ಮತ್ತು ಆಂಗ್ಲ ಮಾಧ್ಯಮಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿಗಳನ್ನು ಶಾಲೆಯಲ್ಲಿ ಪಡೆಯಬಹುದಾಗಿದೆ.

ಪರೀೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿಯುಸಿ ಮುಗಿಯುವವರೆಗೆ ವಸತಿ ಸಹಿತ/ರಹಿತ ಉಚಿತ ಶಿಣ ನೀಡಲಾಗುವುದು. ಪ್ರತಿ ವರ್ಷ ಶೇ. 80 ರಿಂದ ಶೇ. 90 ಕ್ಕಿಂತ ಅಧಿಕ ಅಂಕ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ತಿಡಗುಂದಿ ಸಂಸ್ಥೆಯ ಪರೀಾ ಭವನದಲ್ಲಿ ಮೇ 18 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಪ್ರವೇಶ ಪರೀೆ ನಡೆಯಲಿದೆ.

ಪ್ರವೇಶ ಪರೀೆಯ ಅರ್ಜಿ ಫಾಮ್​ರ್ಗಳನ್ನು ಸಂಸ್ಥೆ ಕಚೇರಿಯಲ್ಲಿ ಮೇ 15 ರೊಳಗಾಗಿ ಪಡೆದುಕೊಳ್ಳಬಹುದು ಅಥವಾ ಡಿಡಿಡಿ.ಜಠಠಠಿಜಿಛಚಜ್ಠ್ಞಛಜಿ.್ಚಟಞ ಆನ್​ಲೈನ್​ನಲ್ಲಿ ಪಡೆಯಬಹುದು. ಎಲ್ಲ ದಾಖಲಾತಿಗಳೊಂದಿಗೆ ಪರೀೆಗೆ ಎರಡು ದಿನ ಮುಂಚಿತವಾಗಿ ಮಾನಸಗಂಗೋತ್ರಿ ಪ್ರತಿಷ್ಠಿತ ವಸತಿ ಶಾಲೆ, ವಿದ್ಯಾ ವಿಕಾಸಸೌಧ ವಿದ್ಯಾಗಿರಿ, ಆರ್​ಎಸ್​ ನಂ. 92 , ಎನ್​ಎಚ್​&52, ಸೊಲ್ಲಾಪುರ ರಸ್ತೆ, ಎಚ್​ಪಿ ಪೆಟ್ರೋಲ್​ ಪಂಪ್​ ಹತ್ತಿರ, ತಿಡಗುಂದಿ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 8123460582, 9632600582, 9606081840 ಮತ್ತು 9448118593ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net