ಮಾನವೀಯತೆಯೇ ನಿಜವಾದ ದೇವರು

20230809_132935(0)
Published on

ಶ್ರೀರಂಗಪಟ್ಟಣ: ಪ್ರಜೆಗಳಿಗೆ ಯಾವಾಗ ಸಮಾನತೆ, ಸಹೋದರತ್ವ ಹಾಗೂ ಸ್ವಾತಂತ್ರ್ಯ ಲಭಿಸಿ, ಭ್ರಷ್ಟಾಚಾರ ವಿರೋಧಿಸುತ್ತಾರೋ ಅಂದು ಪ್ರಜ್ಞಾವಂತ ನಾಗರಿಕರಾಗುತ್ತಾರೆ ಎಂದು ವಿಚಾರವಾದಿ ಪ್ರೊ.ಭಗವಾನ್ ತಿಳಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬುಧವಾರ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜ್ಞಾವಂತ ನಾಗರಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಮನುಷ್ಯನೇ ನೆರವಾಗಬೇಕೇ ಹೊರತು, ಇನ್ಯಾವ ಕಾಣದ ಶಕ್ತಿಯೂ ನಮ್ಮಲ್ಲಿ ಇಲ್ಲ. ನಮ್ಮೊಳಗಿನ ಅರಿವು ಹಾಗೂ ಸೇವಾ ಮನೋಭಾವನೆಯ ಮಾನವೀಯತೆಯೇ ನಿಜವಾದ ದೇವರು ಎಂದು ಹೇಳಿದರು.

ಪ್ರೊ. ನಂಜರಾಜ ಅರಸ್ ಮಾತನಾಡಿ, ಪ್ರಜ್ಞಾವಂತ ಮತದಾರರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜಾತಿ, ಧರ್ಮಭೇದ ತೋರದೆ ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು. ಇಂತಹ ಮನಸ್ಥಿತಿ ರಾಜಕಾರಣದಲ್ಲಿ ಮರೆಯಾಗುತ್ತಿರುವುದು ದುಃಖದ ಸಂಗತಿ. ಪ್ರಜೆಗಳು ಸಹ ಭ್ರಷ್ಟ ನೀತಿ, ಆಮಿಷದಿಂದ ಹೊರಬರಬೇಕು ಎಂದು ಹೇಳಿದರು.

ಆಟೋಚಾಲಕ ಚಂದ್ರಶೇಖರ್, ಟೈಲರ್ ಶಿವಕುಮಾರ್, ಬೀದಿ ಬದಿ ವ್ಯಾಪಾರಿ ರಾಧಮ್ಮ ಅವರಿಗೆ ಪ್ರಜ್ಞಾವಂತ ನಾಗರಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಮಕ್ಕಳ ತಜ್ಞ ಡಾ.ಸುಜಯ್ ಕುಮಾರ್, ಸಾಹಿತಿ ಗುರುಮೂರ್ತಿ, ಲಯನ್ ವೆಂಕಟೇಶ್, ಶಿಕ್ಷಕರಾದ ಚಂದ್ರಣ್ಣ, ಕೆ.ಶೆಟ್ಟಹಳ್ಳಿ ಗ್ರಾಪಂ ಸದಸ್ಯ ಅಪ್ಪಾಜಿ, ವೇದಿಕೆಯ ಸದಸ್ಯರಾದ ಜೈಶಂಕರ್, ಶಿವಕುಮಾರ್, ಪ್ರಿಯಾ ರಮೇಶ್, ಅಂಬೇಡ್ಕರ್ ಒಕ್ಕೂಟಗಳ ಅಧ್ಯಕ್ಷ ಗಂಜಾಂ ರವಿಚಂದ್ರ, ರೈತ ಮುಖಂಡ ಪಾಂಡು, ಎಎಪಿ ನಾಯಕಿ ಅಮ್ರಿನ್ ತಾಜ್, ಬುದ್ಧ ಸಮಾಜದ ಕೆ.ಟಿ.ರಂಗಯ್ಯ, ಇತರ ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net