ಮಾನವೀಯತೆ ಮೆರೆದ ಮತ್ತಿಮೂಡ

1405kamalapur03
Published on

ಕಮಲಾಪುರ: ಮುಂಬೈಗೆ ಕೂಲಿಗಾಗಿ ಹೋಗಿದ್ದ ಕುಟುಂಬವೊಂದು ಲಾಕ್ಡೌನ್ಗೆ ಸಿಲುಕಿ ಸಂಕಷ್ಟಕ್ಕೆ ಎದುರಾಗಿ ನಡೆದುಕೊಂಡು ಬರುತ್ತಿದ್ದರು.
ಸತತವಾಗಿ ಎಂಟು ದಿನಗಳಿಂದ ನಡೆದುಕೊಂಡು ಬಂದು ತಾಲೂಕಿನ ಮಹಾಗಾಂವ್ ಕ್ರಾಸ್ಗೆ ಆಗಮಿಸಿದಾಗ ಶಾಸಕ ಬಸವರಾಜ ಮತ್ತಿಮೂಡ ಅವರು ಆ ಕುಟುಂಬವನ್ನು ವಿಚಾರಿಸಿದಾಗ, ಗುರುಮಿಠಕಲ್ ಸಮೀಪದ ನಾರಾಯಣಪೂರಕ್ಕೆ ಹೋಗಬೇಕಾಗಿದೆ ಸರ್. ಕೂಲಿ ಮಾಡಲು ಮುಂಬೈಗೆ ಹೋಗಿದ್ದೆವು, ಪ್ರಯಾಣಕ್ಕೆ ಹಣವಿಲ್ಲದೇ ಕಾಲ್ನಡಿಗೆಯ ಮೂಲಕ ಬರುತ್ತಿದ್ದೇವೆ. ಜತೆಗೆ ಚಿಕ್ಕ ಮಕ್ಕಳು ಸಹ ಇವೆ, ಹೇಗಾದರೂ ಮಾಡಿ ನಮ್ಮ ಗ್ರಾಮಕ್ಕೆ ಕಳುಹಿಸಿಕೊಡಿ ಎಂದು ಅಂಗಲಾಚಿದರು.
ಕೂಡಲೇ ಸ್ಪಂದಿಸಿದ ಶಾಸಕ ಮತ್ತಿಮೂಡ ತಹಸೀಲ್ದಾರ್ ಗಮನಕ್ಕೆ ತಂದು ಸ್ಕ್ರೀನಿಂಗ್ ಮಾಡಿಸಿ, ಅಲ್ಲದೇ ಅವರಿಗೆ ಆಹಾರ, ಕುಡಿಯುವ ನೀರು ಒದಗಿಸಿದರು. ಅವರೇ ಸ್ವತಃ ಖಾಸಗಿ ವಾಹನಕ್ಕೆ ಬಾಡಿಗೆ ಹಣ ನೀಡಿ ಕಳುಹಿಸಿಕೊಟ್ಟರು.
ಮುಖಂಡ ಶಿವಕುಮಾರ ಪಸಾರ, ರಾಜಕುಮಾರ ಗಬರಾದಿ, ಜಗನ್ನಾಥ ಮಾಲಿಪಾಟೀಲ್, ಗಿರೀಶ ಪಾಟೀಲ್, ಸಂತೋಷ ಪಾಟೀಲ್, ಶರಣಗೌಡ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net