ಮಾನವೀಯತೆ ಮೆರೆದ ಪೊಲೀಸರು

GJD 2
Published on

ಗಜೇಂದ್ರಗಡ: ಪಟ್ಟಣದಲ್ಲಿ ಓಡಾಡುತ್ತಿದ್ದ ಇಬ್ಬರು ಮಾನಸಿಕ ಅಸ್ವಸ್ಥರಿಗೆ ಸಹಾಯ ಮಾಡುವ ಮೂಲಕ ಇಬ್ಬರು ಪೊಲೀಸ್ ಪೇದೆಗಳು ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಅಲೆದಾಡುತ್ತಿದ್ದ ಬುದ್ದಿಮಾಂದ್ಯ ಹಾಗೂ ವಾಣಿಪೇಟೆಯಲ್ಲಿದ್ದ ಮತ್ತೊಬ್ಬ ಮಾನಸಿಕ ಅಸ್ವಸ್ಥನನ್ನು ಗಮನಿಸುತ್ತಿದ್ದ ಪೊಲೀಸ್ ಪೇದೆಗಳಾದ ವೀರನಗೌಡ ಪಾಟೀಲ ಹಾಗೂ ಪ್ರಕಾಶ ಭೂಸನೂರಮಠ ಅವರು, ತಮ್ಮ ಸ್ವಂತ ವಾಹನಗಳಲ್ಲಿ ಇಬ್ಬರನ್ನು ಕರೆದೊಯ್ದು ಶುಚಿಗೊಳಿಸಿದ್ದಾರೆ. ಕೇಶ ಮುಂಡನ ಮಾಡಿಸಿ, ಸ್ನಾನ ಮಾಡಿಸಿದ್ದಾರೆ. ನಂತರ ಹೊಸ ಬಟ್ಟೆ ಹಾಗೂ ಊಟ ಕೊಡಿಸಿ ಅವರಿದ್ದ ಸ್ಥಳಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಪೊಲೀಸರ ಕಾರ್ಯಕ್ಕೆ ಕ್ಯಾಮರಾ ಜರ್ನಲಿಸ್ಟ್ ಜಗದೀಶ ಹೊಸಳ್ಳಿ ಅವರು ಕೂಡ ಸಾಥ್ ನೀಡಿದ್ದಾರೆ. ಇವರ ಮಾನವೀಯ ಕಾರ್ಯಕ್ಕೆ ಪಟ್ಟಣದ ನಿವಾಸಿಗಳು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net