

ಚಿತ್ರದುರ್ಗ: ಕೋಲ್ಕತ್ತಾದ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಎಬಿವಿಪಿ ಕಾರ‌್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭ ಟನೆ ನಡೆಸಿದರು. ನಗರದ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ,ಡಿಸಿ ಕಚೇರಿ ಬಳಿ ಪ್ರತಿಭಟಿಸಿದ ಕಾರ‌್ಯಕರ್ತರು,ಈ ಹತ್ಯೆಯಿಂದಾಗಿ ಮಾನವೀಯ ಸಮಾಜ ತಲೆತಗ್ಗಿಸುವಂತಾಗಿದೆ.
ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಹಿಂದಿನ ಅನೇಕ ಪ್ರಕರಣಗಳ ತಪ್ಪಿಸ್ಥರಿಗೆ ಶಿಕ್ಷೆ ವಿಧಿಸದೆ ಅವರ ಬೆನ್ನಿಗೆ ನಿಂತಿದ್ದು ಇಂಥ ಕೃತ್ಯಕ್ಕೆ ಕಾರಣವಾಗಿದೆ. ಅಲ್ಲಿಯ ಸರ್ಕಾರದ ಇಂಥ ನಡೆಗಳಿಂದಾಗಿ ಮತ್ತೆ,ಮತ್ತೆ ಮಹಿಳೆಯರ ಮೇಲೆ ದೌರ್ಜನ್ಯಗಳಾಗುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರಕರಣದ ತಪ್ಪಿತಸ್ಥರನ್ನು ಶಿಕ್ಷಗೆ ಒಳಪಡಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆರ್‌ಎಚ್‌ಎಂ ಒ.ಮಂಜುನಾಥ ಅವರಿಗೆ ಮನವಿ ಸಲ್ಲಿಸಿದ ರು. ಕನಕರಾಜ್‌ಕೋಡಿಹಳ್ಳಿ,ಗೋಪಿ,ಚಿತ್ರಸ್ವಾಮಿ, ಚಂದನಾ,ಸುದೀಪ್,ಚರಣ್,ಸಂಜು,ಜೀವನ್,ಮಿಥುನ್,ಆದರ್ಶ ಮತ್ತಿತರರ ಕಾರ‌್ಯಕರ್ತ ರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.