ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಿ

02arsph1ep
Published on

ಅರಸೀಕೆರೆ: ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನ ಹಾಗೂ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೋಮವಾರ ಸಾರ್ವಜನಿಕರ ಕುಂದುಕೊರತೆ ಅಹವಾಲು ಆಲಿಸಿದರು.


ಪಹಣಿ ತಿದ್ದುಪಡಿ, ವಿಧವಾ ವೇತನ, ಪಿಂಚಣಿ ಸೇರಿ ಹಲವು ಸಮಸ್ಯೆಗಳು ಗ್ರಾಮೀಣ ಜನರಿಗೆ ಎದುರಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಡಿ ಕೆಲಸ ಮಾಡಿಕೊಟ್ಟಾಗ ಮಾತ್ರವೇ ಸರ್ಕಾರದ ಜನಪರ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗಲಿದೆ ಎಂದರು.


ಮಧ್ಯಾಹ್ನ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ನಡೆದ ಸಭೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಆಗಮಿಸಿ ಶೌಚಗೃಹ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಬಿಇಒ ಜತೆ ಮಾತನಾಡಿ ಸಮಸ್ಯೆ ಪರಿಹರಿಸವುದಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ಮತ್ತೆ ಕೆಲವರು, ಇ-ಸ್ವತ್ತು, ತಿದ್ದುಪಡಿ ವಿಳಂಬವಾಗುತ್ತಿದ್ದು ಲೋಪ ಸರಿಪಡಿಸುವಂತೆ ಕೇಳಿಕೊಂಡರು. ಪೌರಾಯುಕ್ತ ಕೃಷ್ಣಮೂರ್ತಿ ನಿಗದಿತ ಕಾಲಮಿತಿಯಲ್ಲಿ ದಾಖಲೆ ನೀಡಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.


ಮುಖಂಡರಾದ ಅಬ್ಬುಲ್ ಜಮೀಲ್, ಮಲ್ಲಿಕಾರ್ಜುನ್, ಹರೀಶ್, ಸುಬ್ರಮಣ್ಯಬಾಬು ಸೇರಿದಮತೆ ಹಲವರು ಹಾಜರಿದ್ದರು. ನಗರಸಭೆಯ ಯಾವೊಬ್ಬ ಸದಸ್ಯರೂ ಅಹವಾಲು ಆಲಿಕೆ ಸಭೆಯಲ್ಲಿ ಪಾಲ್ಗೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net