ಮಾನವೀಯ ಗುಣಗಳಿಂದ ವಿದ್ಯೆ, ಹುದ್ದೆಗೆ ಗೌರವ

11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಕಲಿತ ವಿದ್ಯೆ ಮತ್ತು ಹುದ್ದೆಗೆ ಗೌರವ ಬರುತ್ತದೆ. ಮಾನವೀಯತೆ ಮರೆತ ಮನುಷ್ಯ ಪ್ರಾಣಿಗಳಿಗಿಂತ ಕೀಳಾಗಿ ವರ್ತಿಸುತ್ತಾನೆ. ಸಮಾಜದಲ್ಲಿ ಜರಗುತ್ತಿರುವ ಅಪರಾಧಗಳಿಗೆ ಮಾನವೀಯ ಮೌಲ್ಯಗಳ ಕುಸಿತ, ಸಂಸ್ಕಾರವಿಲ್ಲದ ಶಿಕ್ಷಣ, ನೈತಿಕತೆ ಇಲ್ಲದ ಬದುಕು ಕಾರಣ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ವಿದ್ಯಾಗಿರಿ ಜೆ.ಎಸ್.ಎಸ್. ಸಂಸ್ಥೆಯ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಹುಬ್ಬಳ್ಳಿಯ ಪೀಪಲ್ಸ್ ಾರ್ ಎನಿಮಲ್ಸ್ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪೆಟ್ ಬ್ಯಾಂಕ್ ಕಾರ್ಯಕ್ರಮದಲ್ಲಿ ಪ್ರಾಣಿಗಳಿಗೆ ಆಹಾರ ಹಾಗೂ ಅವಶ್ಯಕ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಮನೋಭಾವನೆ ಬದಲಾಗಬೇಕಿದೆ. ತನ್ನಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಅವುಗಳಿಗೆ ತೊಂದರೆ ಕೊಡದೆ ಅವುಗಳಿಗೆ ಬದುಕಲು ಬಿಡಬೇಕು ಎಂಬ ವಿಚಾರ ವಿದ್ಯಾರ್ಥಿಗಳಲ್ಲಿ ಬರಬೇಕು. ಈ ನಿಟ್ಟಿನಲ್ಲಿ ಪ್ರಾಣಿಗಳಿಗೆ ಆಹಾರ, ಔಷಧಿ, ಅಗತ್ಯ ಪರಿಕರಗಳನ್ನು ಹುಬ್ಬಳ್ಳಿಯ ಪೀಪಲ್ಸ್ ಾರ್ ಎನಿಮಲ್ಸ್ ಸಂಸ್ಥೆಗೆ ನೀಡುತ್ತಿರುವ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು
ಪೀಪಲ್ಸ್ ಾರ್ ಎನಿಮಲ್ಸ್ ಸಂಸ್ಥೆಯ ಅಧ್ಯಕ್ಷ ತೇಜರಾಜ ಜೈನ್, ಕಾರ್ಯದರ್ಶಿ ವಿಕ್ಕಿ ಸಿಂಗ್, ಸಚಿನ್ ಮಹಿಶೇರಿ, ಲಕ್ಷ್ಮೀ  ರಾಜಗೋಪಾಲ, ಪ್ರಮೋದಿನಿ ಶೆಟ್ಟಿ, ಸುರೇಶ ಜೈನ್, ಮನೋಜ ಎಂ., ಅರವಿಂದ ಜೈನ್, ಪ್ರಾಚಾರ್ಯೆ ಸಾಧನಾ. ಎಸ್., ಮಹಾವೀರ ಉಪಾಧ್ಯೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net