ಮಾನವನಿಂದ ಹಾಳು

sri parisara
ಕಲ್ಕಟ್ಟೆಯಲ್ಲಿ ತಹಸೀಲ್ದಾರ್ ಅನುಪ್ ಸಂಜೋಗ್, ಎಚ್.ಸುದೀಪ್ ಗಿಡ ನೆಟ್ಟರು. ಮಂಜುನಾಥ್, ಅರುಣ್‌ಕುಮಾರ್, ಶಾಲಾ ಮಕ್ಕಳು ಇದ್ದರು.
Published on

ಶೃಂಗೇರಿ: ನಮ್ಮ ಸುತ್ತಮುತ್ತಲಿನ ಪರಿಸರದ ಸೊಬಗನ್ನು ಕಂಡರೆ ಮನಸ್ಸು ಪ್ರಸನ್ನವಾಗುತ್ತದೆ. ಆದರೆ ವೈವಿಧ್ಯಮಯ ಹೂಗಳು, ಶುದ್ಧ ಗಾಳಿ ನೀಡುವ ಮರಗಳು ಮರೆಯಾಗಿವೆ ಎಂದು ತಾಪಂ ಇಒ ಎಚ್.ಸುದೀಪ್ ತಿಳಿಸಿದರು.

ಮೆಣಸೆ ಗ್ರಾಪಂ ಕಲ್ಕಟ್ಟೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿ,

ಮಾನವನ ಆವಿಷ್ಕಾರಗಳ ಆಶಯಗಳಲ್ಲಿ ಪರಿಸರದಲ್ಲಿ ಹಸ್ತಕ್ಷೇಪ ಮಾಡಲು ಪ್ರಾರಂಭಿಸಿದ ಕಾರಣ ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದೆ. ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ಅದರ ಸದುಪಯೋಗ ಪಡೆಯಲು ಸಾಧ್ಯ ಎಂದರು.

ಮೆಣಸೆ, ಕೆರೆಕಟ್ಟೆ, ಕುತೂಗೋಡು ಗ್ರಾಪಂ ವ್ಯಾಪ್ತಿಯ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ತಹಸೀಲ್ದಾರ್ ಅನುಪ್ ಸಂಜೋಗ್, ವಲಯ ಅರಣ್ಯಾಧಿಕಾರಿ ಮಂಜುನಾಥ್, ತಾಪಂ ಸಿಬ್ಬಂದಿ ಮಂಜು, ಅರಣ್ಯ ಇಲಾಖೆ ಸಿಬ್ಬಂದಿ ಅರುಣ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net