ಚಿಕ್ಕಮಗಳೂರು ತಾಲೂಕಿನ ಗಾಳಿಪೂಜೆ ಗ್ರಾಮದಲ್ಲಿ ಶ್ರೀಸತ್ಯಸಾಯಿ ಸೇವಾ ಸಮಿತಿ ಮತ್ತು ಸೇವಾಕ್ಷೇತ್ರದ ಆಶ್ರಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರ ೯೯ನೆಯ ಜನ್ಮದಿನೋತ್ಸವದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಾಪಂ ಮಾಜಿ ಅಧ್ಯಕ್ಷ ವೈ.ಜಿ.ಸುರೇಶ್ ಉದ್ಘಾಟಿಸಿದರು. ಡಾ.ಜೆ.ಪಿ.ಕೃಷ್ಣೇಗೌಡ, ಟಿ.ಪಿ.ಭೋಜೇಗೌಡ, ಡಾ.ನವೀನ್, ಡಾ.ಸಚಿನ್, ಡಾ.ಅಭಿಷೇಕ್ ಮತ್ತಿತರರಿದ್ದರು.
Published on:
Copied
Follow Us
ಚಿಕ್ಕಮಗಳೂರು: ಮಾನವನ ಸೇವೆಯೆ ಮಾಧವನ ಸೇವೆ ಎಂಬ ಶ್ರೀಸತ್ಯಸಾಯಿ ಬಾಬಾ ಆಶಯದಂತೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದು ಶ್ರೀಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ತಿಳಿಸಿದರು.