ಮಾನವನ ಉನ್ನತಿಗಾಗಿ ಜೀವನ ಮುಡಿಪು

5-SanduruP2
??????????
Published on

ಸಂಡೂರು: ಈದ್ ಮಿಲಾದ್ ಅಂಗವಾಗಿ ನಗರದ ದರ್ಗಾ ಮಸೀದಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಬಳಿಕ ಈದ್ಗಾ ಮೈದಾನದಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರ ಅವರು ಶಾಂತಿದೂತರಾಗಿದ್ದಾರೆ. ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿದ್ದರು. ನಮಾಜ್ ಪದ್ಧತಿಯನ್ನು ಜಗತ್ತಿಗೆ ತಿಳಿಸಿದರು. ಉತ್ತಮ ಧರ್ಮ ಗ್ರಂಥವಾದ ಖುರಾನನ್ನು ಜನರಿಗೆ ನೀಡಿದ್ದಾರೆ. ಮಾನವನ ಉನ್ನತಿಗಾಗಿ ಜೀವನವನ್ನು ಮುಡುಪಾಗಿಟ್ಟು ಶಾಂತಿ ಸಂದೇಶ ಸಾರಿದ್ದಾರೆ. ಹಿಂದುಗಳು ನಮ್ಮ ಅನೇಕ ಹಬ್ಬಗಳನ್ನು ಆಚರಿಸುತ್ತಾ ಭಾವೈಕ್ಯ ಮೆರೆಯುತ್ತಾರೆ ಎಂದರು.

ಜಶ್ನೆ ಈದ್ ಮಿಲಾದುನ್ನಬಿ ಕಮಿಟಿ ತಾಲೂಕು ಅಧ್ಯಕ್ಷ ರೋಷನ್ ಜಮೀರ್, ಉಪಾಧ್ಯಕ್ಷ ಸಿ.ಎಚ್.ಖಾಸಿಂಪೀರಾ, ಅಂಜುಮನ್ ಕಮಿಟಿ ಅಧ್ಯಕ್ಷ ಸಿ.ಹಸೇನ್ ಸಾಬ್, ಮನ್ಸೂರ್ ಹುಸೇನ್, ಕೆ.ಖಾಸಿಂಸಾಬ್, ಕೆ.ಆರ್.ದಾದಾಪೀರ್, ನಬೀಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net