ಮಾನವಜನ್ಮ ಸಾರ್ಥಕ ಮಾಡಿಕೊಳ್ಳಬೇಕು

2
ಐನಾಪುರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮದ್ಯವರ್ಜನ ಸಮಾರೋಪದಲ್ಲಿ ಬಸವೇಶ್ವರ ಸ್ವಾಮೀಜಿ ಮಾತನಾಡಿದರು. ಪ್ರೇಮಲತಾ ರೆಡ್ಡಿ, ನಾಗರತ್ನಮ್ಮ ಹೆಗಡೆ, ಸಂಜಯ ನಾಡಗೌಡ ಇತರರಿದ್ದರು.
Published on

ಐನಾಪುರ: ಮನುಷ್ಯ ಜನ್ಮ ಅತಿ ಶ್ರೇಷ್ಠವಾಗಿದ್ದು, ಸಾರ್ಥಕಪಡಿಸಿಕೊಳ್ಳಬೇಕು ಎಂದು ಸ್ಥಳೀಯ ಗುರುದೇವ ಆಶ್ರಮದ ಬಸವೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಐನಾಪುರ ಪಟ್ಟಣದ ಶ್ರೀ ವಿಶ್ವನಾಥ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ ಅಥಣಿ, ಚಿಕ್ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆರಕ್ಷಕ ಠಾಣೆ, ಪ್ರಗತಿ ಬಂಧು ಸ್ವಸಹಾಯ ಸಂಘ ಐನಾಪುರ ವಲಯ, ತಾಲೂಕು ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 1767ನೇ ಮದ್ಯವರ್ಜನ ಶಿಬಿರ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯೋಜನಾಧಿಕಾರಿ ಭಾಸ್ಕರ್ ಎನ್., ಜಿಲ್ಲಾ ಜನ ಜಾಗೃತಿ ಅಥಣಿ ಚಿಕ್ಕೋಡಿ ಅಧ್ಯಕ್ಷ ಸಂಜಯ ನಾಡಗೌಡ, ಜಿಪಂ ಮಾಜಿ ಸದಸ್ಯೆ ಪ್ರೇಮಲತಾ ರೆಡ್ಡಿ, ನಾಗರತ್ನಮ್ಮ ಹೆಗಡೆ, ಕಾವೇರಿ ಅಮ್ಮನವರು, ಅಮರ್ ದುರ್ಗನವರ್, ಪ್ರಕಾಶ ಕೋರ್ಬು, ವಿರೂಪಾಕ್ಷಿ ಡೂಗನವರ, ಎ.ಬಿ. ಪಾಟೀಲ, ವೀರಭದ್ರ ಕಟಗೇರಿ ಮಾತನಾಡಿದರು. ಮದ್ಯವರ್ಜನ ಶಿಬಿರದಲ್ಲಿ 56 ಜನ ಪಾಲ್ಗೊಂಡಿದ್ದರು. ಶಿವಾನಂದ ಹೊಸಮನಿ, ವಿಠ್ಠಲ ಹಳ್ಳೊಳ್ಳಿ, ಅನಿಲ ತಳವಾರ, ಸಿದ್ದು ಪೌಲಿ, ಯೋಜನಾಧಿಕಾರಿ ಸಂಜೀವ ಮರಾಠೆ, ನಾರಾಯಣ ಎಂ., ಮೇಲ್ವಿಚಾರಕಿ ಸವಿತಾ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net