ಮಾನವ ಸಂಪನ್ಮೂಲದ ಸದ್ಬಳಕೆಯಾಲಿ

web8
ಹಲಗತ್ತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಚಟುವಟಿಕೆ ಕಾರ್ಯಕ್ರಮವನ್ನು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾಕರ ಎಸ್.ಎಚ್. ಉದ್ಘಾಟಿಸಿದರು. ಐ.ಪಿ.ಮುಳ್ಳೂರ, ಎಸ್.ಐ.ಹೊಸಮನಿ, ಬಿ.ಎಚ್.ತಿಮ್ಮನಗೌಡ್ರ, ಪಿ.ಡಿ.ಕಾಲವಾಡ ಇತರರಿದ್ದರು.
Published on

ರಾಮದುರ್ಗ: ಜನಸಂಖ್ಯಾ ಸ್ಫೋಟ ಹಾಗೂ ಅದರಿಂದಾಗುವ ಸಮಸ್ಯೆ ಕುರಿತು ವಿದ್ಯಾರ್ಥಿ ದಿಶೆಯಲ್ಲಿಯೇ ತಿಳಿದುಕೊಂಡಲ್ಲಿ ದುಷ್ಪರಿಣಾಮ ತಪ್ಪಿಸಲು ಸಾಧ್ಯ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾಕರ
ಎಸ್.ಎಚ್.ಹೇಳಿದರು.

ತಾಲೂಕಿನ ಹಲಗತ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಜನಸಂಖ್ಯಾ ಶಿಕ್ಷಣ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಸಂಪನ್ಮೂಲಗಳ ಸದ್ಬಳಕೆ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅಂದಾಗ ವಿಷಯದ ಆಳ ತಿಳಿಯಲು ಸಹಕಾರಿಯಾಗುತ್ತದೆ ಎಂದರು.

ಬಿಆರ್‌ಪಿ ಹಾಗೂ ಎನ್‌ಪಿಇಪಿ ನೋಡಲ್ ಅಧಿಕಾರಿ ಐ.ಪಿ.ಮುಳ್ಳೂರ ಮಾತನಾಡಿದರು. ಜನಪದ ನೃತ್ಯ, ಏಕಪಾತ್ರಾಭಿನಯ, ಕ್ವಿಜ್, ಚಿತ್ರಕಲೆ ಸೇರಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕರಾದ ಎಸ್.ಐ.ಹೊಸಮನಿ, ಬಿ.ಎಚ್.ತಿಮ್ಮನಗೌಡ್ರ, ಟಿ.ಪಿ. ಜಲಗೇರಿ, ದೈಹಿಕ ಶಿಕ್ಷಣ ಪರೀವಿಕ್ಷಕ ಪಿ.ಡಿ.ಕಾಲವಾಡ, ಬಿಆರ್‌ಪಿಗಳಾದ ಕೆ.ವೈ.ಪಾಟೀಲ, ಎ.ಐ.ಅತ್ತಾರ, ಸಿಆರ್‌ಸಿ ಆರ್.ಎಂ.ಮೂಲಿಮನಿ, ಎಸ್.ಕೆ. ಕಂದಗಲ್, ಟಿ.ಜಿ.ಕರದಿನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net