ಮಾನವ ಕುಲದ ಭೇದ ಅಳಿಸಿದ ರೇಣುಕ

2303klb07
Published on

ಕಲಬುರಗಿ: ದೇವರಿಗೆ ಹತ್ತಿರವಾಗುವ ಸರಳ ತತ್ವಗಳನ್ನು ಬೋಧಿಸಿದ ರೇಣುಕಾಚಾರ್ಯರು, ಮಾನವ ಕುಲ ತಾನೊಂದೇ ಎಂಬ ಸಂದೇಶ ಸಾರಿ ಸಮಾಜದಲ್ಲಿನ ಭೇದ ಅಳಿಸುವ ಮಾರ್ಗ ತೋರಿದರು ಎಂದು ಚಂದನಕೇರದ ಪಂ.ಶಿವರುದ್ರಯ್ಯ ಶಾಸ್ತಿç ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಾನವರಲ್ಲಿ ಪರಸ್ಪರ ಅಸ್ಪÊಷ್ಯತೆ, ಪರರ ಬಗ್ಗೆ ಹೀನ ಭಾವ ದೂರ ಮಾಡಲು ರೇಣುಕಾಚಾರ್ಯರು ೧೮ ಜಾತಿಯವರಿಗೆ ಲಿಂಗದೀಕ್ಷೆ ನೀಡುತ್ತಾರೆ. ಅಂಗೈಯಲ್ಲಿ ಇಷ್ಟಲಿಂಗ ಪೂಜೆ ಮಾಡಿ, ಬಾಹ್ಯವನ್ನು ಕಡೆಗಣಿಸಿ ಪೂಜೆಯಲ್ಲಿ ತಲ್ಲೀನವಾಗುವವನೇ ನಿಜ ವೀರಶೈವ ಎಂಬುದು ಸಾರಿದವರು ರೇಣುಕರು ಎಂದು ಹೇಳಿದರು.
ಸೋಮವೇಶ್ವರ ಲಿಂಗದಲ್ಲಿ ತೇತ್ರಾಯುಗದಲ್ಲಿ ಉದ್ಭವಿಸಿದ ರೇಣುಕಾಚಾರ್ಯರು ಶಕ್ತಿ ವಿಶಿಷ್ಟಾದ್ವೆÊತ ಸಿದ್ಧಾಂತವನ್ನು ಭಾರತ ಮಾತ್ರವಲ್ಲಿ ವಿದೇಶದಲ್ಲೂ ಪ್ರಚಾರ ಮಾಡಿದರು. ರೇಣುಕಾಚಾರ್ಯರ ಅವತಾರವಾದ ರೇವಗ್ಗಿ ರೇವಣಸಿz್ದೆÃಶ್ವರ ಬಗ್ಗೆ, ಸಿದ್ಧಾಂತ ಶಿಖಾಮಣಿ ಕುರಿತ ಪುಸ್ತಕಗಳನ್ನು ದೇವಸ್ಥಾನದಲ್ಲಿ ಸರ್ಕಾರದಿಂದ ಇಡಬೇಕು ಎಂದು ಮನವಿ ಮಾಡಿದರು.
ವಚನಗಳ ಸಾರ ಸಂಗ್ರಹವೇ ಸಿದ್ಧಾಂತ ಶಿಖಾಮಣಿ, ಕ್ರಿಯಾಸಾರ, ಲಿಂಗಧಾರಣ ಚಂದ್ರಿಕೆ, ಅನಾದಿ ವೀರಶೈವ ಸಂಗ್ರಹ ಗ್ರಂಥ, ವೀರ ಮಹೇಶ್ವರ ಸಂಗ್ರಹ, ಸದಾಚಾರ ಸಂಗ್ರಹ, ಮುಕ್ತಾಂಗ ಸಂಗ್ರಹ, ವೀರಶೈವ ಚಿಂತಾಮಣಿ ಸೇರಿ ಅನೇಕ ಪ್ರತಿಗಳು ದೊರೆಯುತ್ತವೆ. ಅವುಗಳನ್ನು ಅಧ್ಯಯನ ಮಾಡಬೇಕಿದೆ. ಹಸ್ತಪ್ರತಿಗಳಲ್ಲಿ ವೀರಶೈವ ಉಲ್ಲೇಖವಿದ್ದು, ಅದನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಿಷ್ಟಾಚಾರ ತಹಸೀಲ್ದಾರ್ ನಿಸ್ಸಾರ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಂಗಮ ಸಮಾಜದ ಅಧ್ಯಕ್ಷ ರಾಚೋಟಯ್ಯ ಹಿರೇಮಠ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಹಿರೇಮಠ, ಪ್ರಮುಖರಾದ ಪಿಂಟು ಸ್ವಾಮಿ, ರುದ್ರಮುನಿ ಮಠಪತಿ, ಬಸಯ್ಯ ಸ್ವಾಮಿ, ಶಿವಕುಮಾರ ಹಿರೇಮಠ, ವೀರಭದ್ರಯ್ಯ ಮಠ, ಅಂಬ್ರೇಶ್ವರ ರಾವೂರ, ವಿರುಪಯ್ಯ ಮಠ ಇತರರಿದ್ದರು.

ವೀರಶೈವ ಉಜ್ಜನಿ ಪೀಠದ ಜಾತವೇದ ಮುನಿಗಳಿಂದ ಬಸವಣ್ಣನವರಿಗೆ ದೀಕ್ಷೆ: ಬಸವಣ್ಣನವರು ಕಲ್ಯಾಣಕ್ಕೆ ಬರುವ ಮುನ್ನ ಕೂಡಲ ಸಂಗಮದಲ್ಲಿ ವೀರಶೈವ ಪರಂಪರೆಯ ಉಜ್ಜನಿಯ ಶಾಖಾ ಪೀಠದ ಜಾತವೇದ ಮುನಿ ಶಿವಾಚಾರ್ಯರಿಂದ ಉಪದೇಶ ಪಡೆಯುತ್ತಾರೆ. ಇದು ವೀರಶೈವ ಧರ್ಮದ ಹೆಗ್ಗಳಿಕೆಯಾಗಿದೆ. ೧೨ನೇ ಶತಮಾನದಲ್ಲಿ ವೀರಶೈವ ಧರ್ಮವನ್ನು ಪ್ರಚಾರಕ್ಕೆ ತಂದವರು ಶರಣರು. ಬಸವಕಲ್ಯಾಣದ ತ್ರಿಪುರಾಂತದಲ್ಲಿ ರುದ್ರಮುನಿಶ್ವರರ ಗದ್ದುಗೆ ಇದ್ದು, ಅವರು ರೇವಣಸಿz್ದÉÃಶ್ವರರ ಕುಲಸಂಜಾತರರು ಎಂದು ಪಂ.ಶಿವರುದ್ರಯ್ಯ ಶಾಸ್ತಿç ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net