ಮಾನವ ಕಲ್ಯಾಣವೇ ಎಲ್ಲ ಧರ್ಮಗಳ ತಿರುಳು

Capture1
Published on

ಬೀದರ್: ದೇಶದಲ್ಲಿ ಹಲವು ಧರ್ಮಗಳಿದ್ದರೂ ಎಲ್ಲ ಧರ್ಮಗಳ ತಿರುಳು ಮಾನವ ಕಲ್ಯಾಣವೇ ಆಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ನುಡಿದರು.

ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರಲಿದೆ. ಧರ್ಮದ ನಾಶ ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ರೇಣುಕಾದಿ ಪಂಚಾಚಾರ್ಯರು ಸರ್ವರ ಒಳಿತು ಬಯಸುವಂಥ ಧರ್ಮ ಸ್ಥಾಪಿಸಿದ್ದರು. ಪಂಚ ಪೀಠಗಳು ಜಾತ್ಯತೀತ, ಪಕ್ಷಾತೀತವಾಗಿ ಧರ್ಮದ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿವೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕೇದಾರ ಶ್ರೀ ಭೀಮಾಶಂಕರಲಿಂಗ ಜಗದ್ಗುರು ಮಾತನಾಡಿ, ಪಂಚಾಚಾರ್ಯರು, ಬಸವಣ್ಣ ಸೇರಿ ಮಹಾತ್ಮರು ಶ್ಲೋಕ, ವಚನ, ಅಭಂಗಗಳ ರೂಪದಲ್ಲಿ ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕಾಗಿದೆ. ಮನುಷ್ಯನಿಗೆ ಒಳ್ಳೆಯ ಸಂಸ್ಕಾರ, ಭಕ್ತಿಯ ಮಾರ್ಗ ತೋರಬೇಕಾಗಿದೆ. ದೇವರನ್ನು ಗುರುವಿನ ರೂಪದಲ್ಲೇ ಕಾಣಬಹುದಾಗಿದೆ ಎಂದರು.

ಹುಡಗಿಯ ಶ್ರೀ ವಿರೂಪಾಕ್ಷ ಶಿವಾಚಾರ್ಯ, ತಡೋಳಾ ಶ್ರೀ ರಾಜೇಶ್ವರ ಶಿವಾಚಾರ್ಯ, ಲಾಡಗೇರಿ ಶ್ರೀ ಗಂಗಾಧರ ಶಿವಾಚಾರ್ಯ ಸಮ್ಮುಖ ಹಾಗೂ ಹಲಬರ್ಗಾ-ಶಿವಣಿ- ಹೈದರಾಬಾದ್ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯ ನೇತೃತ್ವದಲ್ಲಿ ವೀರಶೈವ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದಶರ್ಿಯೂ ಆದ ಸ್ವಾಗತ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ ಉದ್ಘಾಟಿಸಿದರು. ಸ್ವಾಗತ ಸಮಿತಿ ಕಾಯರ್ಾಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಜಹೀರಾಬಾದ್ ಸಂಸದ ಬಿ.ಬಿ. ಪಾಟೀಲ್, ಶಾಸಕ ರಾಜಶೇಖರ ಪಾಟೀಲ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಸಾಳೆ, ಪ್ರಮುಖರಾದ ಬಸವರಾಜ ಜಾಬಶೆಟ್ಟಿ, ಈಶ್ವರಸಿಂಗ್ ಠಾಕೂರ್, ಡಾ.ಚನ್ನಬಸಪ್ಪ ಹಾಲಹಳ್ಳಿ, ಕುಶಾಲರಾವ ಯಾಬಾ, ಗುರುರಾಜ ಸ್ವಾಮಿ ಮೊಳಕೇರಿ, ರಾಜಕುಮಾರ ಹೆಬ್ಬಾಳೆ, ಮಲ್ಲಿಕಾರ್ಜುನ ಮಾಶೆಟ್ಟಿ, ಮಲ್ಲಿಕಾಜರ್ುನ ಪಾಟೀಲ್ ಚಿಟಗುಪ್ಪ, ಬಸವರಾಜ ದೇಶಮುಖ, ಶಿವರಾಜ ಅಲ್ಮಾಜೆ, ಶಾಂತಕುಮಾರ ಮುದಾಳೆ, ವರದಯ್ಯ ಸ್ವಾಮಿ ಗಾದಗಿ, ಡಾ.ಶರಣಯ್ಯ ಸ್ವಾಮಿ, ಪ್ರೊ.ಕುಮಾರಸ್ವಾಮಿ, ರೈತ ಸಂಘದ ಮಲ್ಲಿಕಾಜರ್ುನ ಸ್ವಾಮಿ, ದಯಾನಂದ ಸ್ವಾಮಿ, ಅನ್ನಪೂಣರ್ಾಬಾಯಿ ಬಿರಾದಾರ, ಓಂಪ್ರಕಾಶ ರೊಟ್ಟೆ, ಕಾಶೀನಾಥ ಜಕ್ಕಾ, ವೀರಶೆಟ್ಟಿ ಖ್ಯಾಮಾ, ಸಂಗಮೇಶ ಮೂಲಗೆ, ಸಂಜೀವಕುಮಾರ ಸ್ವಾಮಿ, ಶಿವಕುಮಾರ ಸ್ವಾಮಿ ಬಂಬಳಗಿ, ಡಾ.ಪ್ರಭುಲಿಂಗ ಸ್ವಾಮಿ, ವಿಶ್ವರಾಧ್ಯ ಶಾಸ್ತ್ರಿ, ಮಹೇಶ್ವರ ಸ್ವಾಮಿ, ಶ್ರೀಕಾಂತ ಸ್ವಾಮಿ, ಮಹಾಲಿಂಗ ಸ್ವಾಮಿ ಇದ್ದರು.

ಯುಗಮಾನೋತ್ಸವದ ಪ್ರಧಾನ ಸಂಘಟಕ ಶಿವಯ್ಯ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಪ್ರಸಾದ ಸಮಿತಿ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಸ್ವಾಗತಿಸಿದರು. ಡಾ.ಮಹಾದೇವಿ ಹೆಬ್ಬಾಳೆ, ಮಹಾರುದ್ರ ಡಾಕುಳಗಿ ನಿರೂಪಣೆ ಮಾಡಿದರು. ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ಸ್ವಾಮಿ ವಂದಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಯುಗಮಾನೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಹುಮನಾಬಾದ್ ತಹಸೀಲ್ದಾರ್ ಡಾ.ಪ್ರದೀಪ ಹಿರೇಮಠ, ಕಲಬುರಗಿ ಸಹಾಯಕ ಪೊಲೀಸ್ ಆಯುಕ್ತ ಜಿ.ಎಂ. ಗಂಗಾಧರ, ಜಿಪಂ ಉಪ ಕಾರ್ಯದಶರ್ಿ ವಿಜಯಕುಮಾರ ಮಡ್ಡೆ, ಎಂ.ಎಸ್. ಸ್ವಾಮಿ, ರಾಕೇಶ ಮಠಪತಿ, ರಾಜಕುಮಾರ ಕಲಬುರಗಿ ಅವರನ್ನು ಜಗದ್ಗುರುಗಳು ಸನ್ಮಾನಿಸಿ ಆಶೀರ್ವದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net