

ಶಹಾಪುರ: ತತ್ವಪದ ಸಾಹಿತ್ಯದ ಮೂಲಕ ಆಧ್ಯಾತ್ಮಿಕ, ವೈಚಾರಿಕ ಚಿಂತನೆ ನೀಡಿದ ಕಲ್ಯಾಣ ಕರ್ನಾಟಕದ ಅಪರೂಪದ ಅಧ್ಯಾತ್ಮಿಕ ಚೇತನ ಅವಧೂತ ರಂಗಲಿAಗೇಶ್ವರರು ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಸಂತರಾಗಿದ್ದಾರೆ ಎಂದು ಜಿಲ್ಲಾ ಮಹರ್ಷಿ ವಾಲ್ಮಿಕಿ ಸಂಘದ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ್ ಹೇಳಿದರು.
ತಾಲೂಕಿನ ಮುಡಬೂಳ ಗ್ರಾಮದಲ್ಲಿ ರಂಗಲಿAಗೇಶ್ವರರ ೧೫ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಧರ್ಮಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಜಾತಿ, ಮತ, ಪಂಥ, ಪಂಗಡ ಎಂಬ ಭೇದ ಮಾಡದೇ ಮನುಕುಲದ ಉದ್ಧಾರಕ್ಕಾಗಿ ತಮ್ಮ ಬದುಕು ಮೂಡುಪಾಗಿಟ್ಟ ಶ್ರೇಷ್ಟ ಶರಣರಾಗಿದ್ದರು ಎಂದರು.
ರAಗಲಿAಗೇಶ್ವರರ ಕ್ಯಾಸೆಟ್ ಬಿಡುಗಡೆ ಮಾಡಿ ಮಾತನಾಡಿದ ಖ್ಯಾತ ವೈದ್ಯ ಡಾ.ಚಂದ್ರಶೇಖರ ಸುಬೇದಾರ, ತ್ರಿಶೂಲಪ್ಪ ಶರಣರ ಸಾನ್ನಿಧ್ಯದಲ್ಲಿ ರಂಗಲಿAಗೇಶ್ವರ ಪುಣ್ಯಾಶ್ರಮವು ಅಧ್ಯಾತ್ಮ, ಸಾಮಾಜಿಕ ಕಾರ್ಯಗಳಲ್ಲಿ ತುಂಬಾ ವಿಶಿಷ್ಟವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಚಿಂತನೆಗಳು ನಾಡಿನಾದ್ಯಂತ ಪ್ರಚುರಪಡಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಥಮ ದರ್ಜೆ ಗುತ್ತಿಗೆದಾರ ದೇವಿಂದ್ರಪ್ಪ ಗೌಡಗೇರಿ, ರಂಗಲಿAಗೇಶ್ವರ ಪುಣ್ಯಾಶ್ರಮ ಅಭಿವೃದ್ಧಿಗೆ ಎಲ್ಲ ರೀತಿಯ ಪ್ರೊತ್ಸಾಹ ಮತ್ತು ಸಹಕಾರ ನೀಡಲಾಗುವುದು ಎಂದರು. ಸಂಶೋಧಕ ಡಾ.ಮೋನಪ್ಪ ಶಿರವಾಳ ಅವರು ತತ್ವಪದ ಸಾಹಿತ್ಯ ಪರಂಪರೆ ಕುರಿತು ಮಾತನಾಡಿದರು.
ತ್ರಿಶೂಲಪ್ಪ ಶರಣರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಮಹಾರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಆರ್ಯುವೇದ ತೈಲ ಹಾಗೂ ಮುಖಂಡರಾದ ಶೇಖರ ದೊರೆ ಆರ್ಯುವೇದ ಚೂರ್ಣ ಬಿಡುಗಡೆ ಮಾಡಿದರು. ಮಹಾದೇವಪ್ಪ ಸಾಲಿಮನಿ, ಸಣ್ಣನಿಂಗಪ್ಪ ನಾಯ್ಕೋಡಿ, ಕಸಾಪ ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಬಸಲಿಂಗಪ್ಪ ಹವಾಲ್ದಾರ, ಪಿಡ್ಡಪ್ಪ ಚನ್ನೂರ, ರವಿ ಯಕ್ಷಿಂತಿ, ಡಾ.ಗೊವಿಂದರಾಜ ಆಲ್ದಾಳ್, ಭಾಗ್ಯ ದೊರೆ, ಡಾ.ಈರಣ್ಣ ಹವಾಲ್ದಾರ, ರಂಗನಾಥ ದೊರೆ ಇತರರಿದ್ದರು.