

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ಟೆÊಫಂಡ್ ಸಂಬAಧಿಸಿದAತೆ ನನ್ನನು ಸೇರಿ ಹಿಂದಿನ ಅಧ್ಯಕ್ಷ ಬಸವರಾಜ ಭೀಮಳ್ಳಿ, ಹಿರಿಯ ವೈದ್ಯ ಡಾ.ಮಲ್ಲಿಕಾರ್ಜುನ ಭಂಡಾರ, ಡಾ.ಸಾಯಿನಾಥ ಆಂದೋಲಾ, ಡಾ.ಶರಣಬಸಪ್ಪ ಹರವಾಳ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಹೈಕೋರ್ಟ್ ರದ್ದುಪಡಿಸಿದ್ದು, ಸತ್ಯಕ್ಕೆ ಜಯವಾಗಿದೆ ಎಂದು ಎಚ್‌ಕೆಇ ಅಧ್ಯಕ್ಷ, ಎಂಲ್‌ಸಿ ಶಶೀಲ ನಮೋಶಿ ತಿಳಿಸಿದ್ದಾರೆ.
ವಿನಾಕಾರಣ ನಮ್ಮ ಮೇಲೆ ಆರೋಪ ಹೊರಿಸಿ ಸಂಸ್ಥೆಯ ಅಭಿವೃದ್ಧಿಗೆ ಹಿನ್ನಡೆ ಮಾಡಲು ಸಮಯಹರಣ ಮಾಡಿz್ದÁಕ್ಕಾಗಿ ವೈಯಕ್ತಿಕವಾಗಿ ಹಾಗೂ ಸಂಸ್ಥಗೆ ಹಿನ್ನಡೆಯಾಗಿದ್ದು, ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ೨೦೨೪ ಮಾರ್ಚ್, ಏಪ್ರಿಲ್‌ನಲ್ಲಿ ಅಂದಿನ ಅಧ್ಯಕ್ಷ, ಆಡಳಿತ ಮಂಡಳಿ ಮೇಲೆ ವೈದ್ಯಕೀಯ ವಿದ್ಯಾರ್ಥಿಗಳು ಎಫ್‌ಐಆರ್ ದಾಳಿಸಿದ್ದರು. ಇದು ಎಚ್‌ಕೆಇ ಚುನಾವಣೆಯಲ್ಲಿ ಅಧ್ಯಕ್ಷರ ಸೋಲಿಗೆ ಕಾರಣವಾಗಿತ್ತು. ಸೋಲು ಅರಗಿಸಿಕೊಳ್ಳಲು ಆಗದೇ ಸುಳ್ಳು ದೂರು ನೀಡಿದ್ದರು. ಕಾನೂನು ರೀತಿ ಅನುಮತಿ ಪಡೆದು ನಿಷ್ಪçಯೋಜಕ ದಾಖಲೆ ಸುಟ್ಟಿದ್ದನ್ನು ಮಹತ್ವದ ದಾಖಲೆ ಎಂದು ಸುಳ್ಳು ಆರೋಪ ಹೊರಿಸಿದ್ದ ಕೇಸ್ ಹೈಕೋರ್ಟ್ ರದ್ದುಪಡಿಸಿ, ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಅಧ್ಯಕ್ಷರು ಸೋಲಿನಿಂದ ಹತಾಸೆಯಿಂದ ಪ್ರಸ್ತುತ ಆಡಳಿತ ಮಂಡಳಿಯ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ೨೦೧೮ರಿಂದ ೨೪ರವರೆಗೆ ೮೦ ಕೋಟಿ ರೂ. ಸ್ಟೆÊಫಂಡ್ ಹಗರಣದ ಕುರಿತು ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದರು. ಇದುವರೆಗೆ ಕ್ರಮ ಆಗಿಲ್ಲ. ಸರ್ಕಾರವನ್ನು ದುರುಪಯೋಗ ಪಡೆಸಿಕೊಂಡತೆ ಕಾಣುತ್ತಿದೆ. ೨೦೦೯ರಿಂದ ೨೦೧೫ರ ಕಾಲದಲ್ಲಿ ಸ್ಟೆÊಫಂಡ್ ಹಗರಣವಾಗಿದೆ ಎಂದು ಆಧಾರರಹಿತ ದೂರು ದಾಖಲಾದಾಗ ಪೊಲೀಸರು ದಬ್ಬಾಳಿಕೆ ಮಾಡಿ, ದಾಖಲೆ ವಶಕ್ಕೆ ಪಡೆದರು. ಮುಖ್ಯ ಕಚೇರಿಯ ನಿತ್ಯದ ಕೆಲಸಕ್ಕೆ ತೊಂದರೆ ಮಾಡಿದರು. ಆದರೆ ಇದೀಗ ಹೈಕೋಟ್ ಕಪಾಳ ಮೋಕ್ಷ ಮಾಡಿದೆ. ಸತ್ಯಕ್ಕೆ ಜಯ ದೊರಕಿದೆ ಎಂದು ತಿಳಿಸಿದ್ದಾರೆ.