ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ಪ್ರತಿಭಟನೆ

20-gdg-4
Published on

ಗದಗ: ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು, ಕೋವಿಡ್-19ರ ಸಂಕಷ್ಟದ ಹಿನ್ನೆಲೆಯಲ್ಲಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ವೇತನ ನೀಡುವುದು ಹಾಗೂ 1995ರಿಂದ ಆರಂಭವಾದ ಕನ್ನಡ ಶಾಲೆಗಳಿಗೆ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಕರ್ನಾಟಕ ಖಾಸಗಿ ಆಡಳಿತ ಮಂಡಳಿ ಮತ್ತು ನೌಕರರ ಸಮನ್ವಯ ಹೋರಾಟ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಡಾ.ಬಸವರಾಜ ಧಾರವಾಡ, ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಹಾಗೂ ನೌಕರರು ಹಲವಾರು ವರ್ಷಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಅವರನ್ನು ಖುದ್ದಾಗಿ ಹಲವಾರು ಬಾರಿ ರ್ಚಚಿಸಿದರೂ ಫಲಪ್ರದವಾಗಿಲ್ಲ. ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸದಿರುವುದು ವಿಷಾದದ ಸಂಗತಿ ಎಂದರು.

ನಂತರ ಅಪರ ಜಿಲ್ಲಾಧಿಕಾರಿ ಎಂ.ಸತೀಶಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು. ಸೂರ್ಯನಾರಾಯಣ ನರಗುಂದಕರ, ಎಸ್.ಎಂ.ಕೊಟಗಿ, ಕೆ.ಬಿ.ಭಜಂತ್ರಿ, ಎಸ್.ಎಂ.ಅಗಡಿ, ಝುಡ್.ಎಂ.ಖಾಜಿ, ಎಂ.ಕೆ.ಲಮಾಣಿ, ಎಸ್.ಕೆ.ಶೆಲ್ಲಿಕೇರಿ, ಬಿ.ಎಸ್.ಬಸನಗೌಡ್ರ, ಎಸ್.ಸಿ.ಚಕ್ಕಡಿಮಠ, ಬಸವರಾಜ ಕೊರ್ಲಹಳ್ಳಿ, ಎ.ಎಸ್.ಪಾಟೀಲ, ವಿ.ವಿ.ನಾಗರಡ್ಡಿ, ಎಸ್.ಬಿ.ಗಿಂಡಿಮಠ, ಎಸ್.ಬಿ.ಪಾಟೀಲ, ಎ.ಆರ್.ಹೆಬ್ಬಳ್ಳಿ, ಎಲ್.ಎಸ್.ಮುಳ್ಳಾಳ, ಎ.ಎಂ. ಕೋಪರ್ಡೆ, ಭಾಗ್ಯಶ್ರೀ ಪೂಜಾರ, ಎಂ.ಎಫ್. ಕಿತ್ತೂರ, ಸಾವಿತ್ರಿ, ಬಿ.ಎಸ್. ಬಂಡಿ ಮತ್ತಿತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net